ಒಂದು ಕಾಲದಲ್ಲಿ ಯಾವುದೇ ಪ್ರಮುಖ ದಾಖಲೆಯನ್ನು ಕಡತದ ರೂಪದಲ್ಲಿ ಜೊತೆಗೆ ತೆಗೆದುಕೊಂಡು ಹೋಗಬೇಕಿತ್ತು. ಗುರುತಿನ ಚೀಟಿಯನ್ನೂ (Identity card) ಜೇಬಿನಲ್ಲಿಟ್ಟುಕೊಂಡು ಹೋಗಬೇಕಿತ್ತು. ಆದರೆ ತಂತ್ರಜ್ಞಾನ ಬೆಳೆದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದ್ದು, ಸಾಫ್ಟ್ ಕಾಪಿ ರೂಪದಲ್ಲಿರುವ ಪ್ರಮುಖ ದಾಖಲೆಗಳಿಗೆ ಅನುಮತಿ ನೀಡುತ್ತಿವೆ.
ಇದನ್ನು ಓದಿ: ಸರ್ಕಾರದ ಮಹತ್ವದ ನಿರ್ಧಾರ, ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಪಡಿತರ ಚೀಟಿ..!
ಅಂದರೆ, ಆ ಡಾಕ್ಯುಮೆಂಟ್ ಡಿಜಿಟಲ್ ರೂಪದಲ್ಲಿದ್ದರೆ ಸಾಕು, ಸರ್ಕಾರ ಅನುಮತಿ ನೀಡುತ್ತದೆ. ಇದು ಸರ್ಕಾರದಿಂದ ಅನುಮೋದಿಸಲ್ಪಟ್ಟ ಮಾದರಿಯಲ್ಲಿಯೂ ಇರಬೇಕು. ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (Pan card), ಡ್ರೈವಿಂಗ್ ಲೈಸೆನ್ಸ್ (driving license) ನಂತಹ ದಾಖಲೆಗಳನ್ನು ಈಗ ಸ್ಮಾರ್ಟ್ಫೋನ್ನಲ್ಲಿಯೇ ಡೌನ್ಲೋಡ್ (download) ಮಾಡಬಹುದು ಮತ್ತು ಎಲ್ಲಿ ಬೇಕಾದರೂ ಬಳಸಬಹುದು.
ಇದನ್ನು ಓದಿ: ಪಡಿತರ ಚೀಟಿಯಲ್ಲಿ ಎಷ್ಟು ವಿಧಗಳಿವೆ, ನಿಮ್ಮ ಕಾರ್ಡ್ ಯಾವ ವರ್ಗಕ್ಕೆ ಸೇರುತ್ತದೆ? ಈ ಕಾರ್ಡ್ ಇದ್ದವರಿಗೆ ಈ ಸೌಲಭ್ಯ..!
ಈ ವಿಧಾನವು ಈಗ ಹೆಚ್ಚು ಸರಳವಾಗಿದ್ದು, ನಿಮ್ಮ ಬಳಿ ವಾಟ್ಸಾಪ್ (WhatsApp) ಇದ್ದರೆ ಸಾಕು. ಈ ಎಲ್ಲಾ ದಾಖಲೆಗಳನ್ನು ನಿಮ್ಮ WhatsApp ನಲ್ಲಿ ಡೌನ್ಲೋಡ್ ಮಾಡಬಹುದು. ಇದಕ್ಕಾಗಿ ಕೇಂದ್ರ ಸರ್ಕಾರದ MyGov ಹೆಲ್ಪ್ಡೆಸ್ಕ್ ಕೆಲವು ದಿನಗಳಹಿಂದೆ ವಾಟ್ಸಾಪ್ ಮೂಲಕ ಪ್ರಮುಖ ದಾಖಲೆಗಳನ್ನು ಡೌನ್ಲೋಡ್ ಮಾಡುವ ಸೌಲಭ್ಯವನ್ನು ಪ್ರಾರಂಭಿಸಿದೆ.
ಇದನ್ನು ಓದಿ: Vodafone Idea: ನೀವು ಈ ಸಿಮ್ ಬಳಸುತ್ತಿದ್ದೀರಾ? ಭರ್ಜರಿ ಸಿಹಿಸುದ್ದಿ..181ರೂ, 599ರೂಗೆ ಅದ್ಭುತ ಕೊಡುಗೆ!
ಇದಕ್ಕಾಗಿ ನಿಮ್ಮ ಬಳಿ ಕೇವಲ ಡಿಜಿಲಾಕರ್ ಖಾತೆ (DigiLocker Account)ಇದ್ದರೆ ಸಾಕು, ವಾಟ್ಸಾಪ್ ಮೂಲಕ ಡಿಜಿಲಾಕರ್ನಿಂದ ನಿಮ್ಮ ಡಾಕ್ಯುಮೆಂಟ್ಗಳನ್ನು ನೀವು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಇದಕ್ಕಾಗಿ ಸರಳ ಹಂತಗಳನ್ನು ಅನುಸರಿಸಿದರೆ ಸಾಕು. ಇದಕ್ಕಾಗಿ ನೀವು MyGov ಸಹಾಯವಾಣಿ ಸಂಖ್ಯೆ +91 9013151515 ಅನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸೇವ್ ಮಾಡಬೇಕು. ನಂತರ WhatsApp ತೆರೆದು MyGov ಸಹಾಯವಾಣಿ ಸಂಖ್ಯೆಯನ್ನು ಸರ್ಚ್ ಮಾಡಬೇಕು.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್; ಅಕ್ಕಿ ಜೊತೆ ಈ ವಸ್ತುಗಳು ಉಚಿತವಾಗಿ ಸಿಗಲಿವೆ!
ಚಾಟ್ ಬಾಕ್ಸ್ ತೆರೆದ ನಂತರ ಹಾಯ್ ಅಥವಾ ನಮಸ್ತೆ ಎಂದು ಸಂದೇಶ ಕಳುಹಿಸಬೇಕು. ಅದರ ನಂತರ ಡಿಜಿಲಾಕರ್ ಸೇವೆಗಳು (DigiLocker Services) ಮತ್ತು ಕೋವಿನ್ ಆನ್ ವಾಟ್ಸಾಪ್ ಎಂಬ ಎರಡು ಆಯ್ಕೆಗಳು ಬರುತ್ತವೆ. ಡಿಜಿಲಾಕರ್ ಖಾತೆಯ ಮೇಲೆ ಕ್ಲಿಕ್ ಮಾಡಿ, ಡಿಜಿಲಾಕರ್ ಖಾತೆಗೆ ಲಿಂಕ್ ಮಾಡಲಾದ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
ಇದನ್ನು ಓದಿ: WhatsApp ಮೂಲಕ LPG ಸಿಲಿಂಡರ್ ಬುಕ್ ಮಾಡುವುದು ಹೇಗೆ? Indane, HP, ಭಾರತ್ ಗ್ಯಾಸ್ ಬುಕ್ ಮಾಡುವ ಸುಲಭ ವಿಧಾನ
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ನಮೂದಿಸಬೇಕು. ನಂತರ ಡಿಜಿಲಾಕರ್ನಲ್ಲಿ ಉಳಿಸಲಾದ ಎಲ್ಲಾ ದಾಖಲೆಗಳು ನಿಮ್ಮ ಚಾಟ್ಬಾಟ್ನಲ್ಲಿ ಕಾಣಿಸುತ್ತವೆ, ಇದರಲ್ಲಿ ನಿಮಗೆ ಅಗತ್ಯವಿರುವ ದಾಖಲೆ ಅಥವಾ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಡೌನ್ಲೋಡ್ ಮಾಡಿದ ಫೈಲ್ಗಳನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿ PDF ಸ್ವರೂಪದಲ್ಲಿ ಸೇವ್ ಆಗುತ್ತದೆ.
ಗಮನಿಸಿ: ಈ ಸೇವೆಯನ್ನು ಬಳಸಲು ನೀವು ಡಿಜಿಲಾಕರ್ ಖಾತೆಯನ್ನು (DigiLocker Account) ಹೊಂದಿರಲೇಬೇಕು. ಅಷ್ಟೇ ಅಲ್ಲ, ಮೂಲ ದಾಖಲೆಗಳನ್ನು ನಿಮ್ಮ ಡಿಜಿಲಾಕರ್ ಖಾತೆಯಲ್ಲಿ ಸೇವ್ ಮಾಡಿರಬೇಕು. ಆಗ ಮಾತ್ರ ದಾಖಲೆಗಳನ್ನು WhatsApp ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ನೀವು ಡಿಜಿಲಾಕರ್ ಖಾತೆಯನ್ನು ಹೊಂದಿಲ್ಲದಿದ್ದರೆ, ನೀವು ಡಿಜಿಲಾಕರ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬಹುದು.
ಇದನ್ನು ಓದಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಯೋಜನೆ; ರೈತರಿಗೆ 15 ಲಕ್ಷ ರೂ ನೀಡುತ್ತಿರುವ ಯೋಜನೆ ಇದೆ