ಪ್ರತೀ ಮನೆಯಲ್ಲೂ ಇಂದು ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಹಲವಾರು ಜನ ವೃತಾಚರಣೆ ಮಾಡುತ್ತಾರೆ. ಗಣೇಶ ಚತುರ್ಥಿಯಂದು ನಿಮ್ಮ ಮನೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿದರೆ ಬಹಳ ಶುದ್ಧದಿಂದ, ಭಕ್ತಿಯಿಂದ ಪೂಜಿಸಬೇಕು. ಆಗ ನಿಮ್ಮ ಇಷ್ಟಾರ್ಥ ಈಡೇರುತ್ತದೆ. ಆದರೆ, ಇಂದು ಈ 5 ಕೆಲಸ ಮಾಡಬಾರದು ಎಂದು ಬಲ್ಲವರು ಹೇಳುತ್ತಾರೆ.
★ಮನೆಯಲ್ಲಿ ಎರಡು ಗಣಪತಿ ಮೂರ್ತಿಗಳನ್ನು ಇಡಬಾರದು.
★ಕಪ್ಪು ಮತ್ತು ನೀಲಿ ಬಟ್ಟೆಗಳನ್ನು ಧರಿಸಿ ಪೂಜೆ ಮಾಡಬಾರದು.
★ಉಪವಾಸದ ದಿನದಂದು ದೈಹಿಕ ಸಂಬಂಧವನ್ನು ಹೊಂದಬೇಡಿ.
★ಗಣೇಶ ಚತುರ್ಥಿಯಂದು ಇಲಿಗಳನ್ನು ಕೊಲ್ಲಬಾರದು.
★ಉಪವಾಸ ಮಾಡುವವರು ಸಾತ್ವಿಕ ಹಣ್ಣುಗಳನ್ನೇ ತಿನ್ನಬೇಕು.
★ಪೂಜೆ ಮುಗಿಯುವವರೆಗೆ/ ದಿನಪೂರ್ತಿ ಚಂದ್ರನನ್ನು ನೋಡಬೇಡಿ.
★ಕತ್ತಲೆಯಲ್ಲಿ ಮೂರ್ತಿಯ ದರ್ಶನ ಮಾಡಬೇಡಿ
★ಹಳೆ ವಿಗ್ರಹ ಪೂಜಿಸಬೇಡಿ. ಹೊಸ ವಿಗ್ರಹ ತನ್ನಿ.
★ಗಣೇಶನಿಗೆ ತುಳಸಿಯನ್ನು ಅರ್ಪಿಸಬೇಡಿ.
ಈ ತಪ್ಪನ್ನು ಅಪ್ಪಿ ತಪ್ಪಿಯೂ ಮಾಡಬೇಡಿ:
★ಗಣೇಶ ಚತುರ್ಥಿಯ 10 ದಿನದವರೆಗೆ ವೃದ್ಧರನ್ನು, ಮಹಿಳೆಯರನ್ನು ಮತ್ತು ಮಕ್ಕಳನ್ನು ಅವಮಾನಿಸಬೇಡಿ.
★ಮನೆಯಲ್ಲಿ ಪುಟ್ಟು ಮಕ್ಕಳಿದ್ದರೆ ಅವರ ಮೇಲೆ ಕೈ ಎತ್ತಬಾರದು ಎಂದು ಹೇಳಲಾಗುತ್ತದೆ.ಮನಸ್ಸು, ಮಾತು ಮತ್ತು ಕಾರ್ಯದಲ್ಲಿ ಹಿಂಸೆಯಿಂದ ದೂರವಿರಬೇಕು.
★ಕೆಟ್ಟ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ಬಾರದಂತೆ ಕಾಪಾಡಿಕೊಳ್ಳಬೇಕು ಎನ್ನುವ ನಂಬಿಕೆಯಿದೆ.ಗಣೇಶ ಚತುರ್ಥಿಯ 10 ದಿನಗಳ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ದೈಹಿಕ ಸಂಬಂಧಗಳನ್ನು ಹೊಂದುವುದು ಒಳ್ಳೆಯದಲ್ಲ.
★ಈ ಅವಧಿಯಲ್ಲಿ ಮಾಂಸದಿಂದ ತಯಾರಿಸಿದ ಆಹಾರ, ಮೀನು ಅಥವಾ ಮೊಟ್ಟೆಗಳಂತಹ ಆಹಾರವನ್ನು, ಈರುಳ್ಳಿ-ಬೆಳ್ಳುಳ್ಳಿ, ಮೂಲಂಗಿ, ಬೀಟ್ರೂಟ್, ಕ್ಯಾರೆಟ್ ಮುಂತಾದ ನೆಲದಡಿಯಲ್ಲಿ ಬೆಳೆಯುವ ಗೆಡ್ಡೆಗಳನ್ನು ಸೇವಿಸಬಾರದು.
★ನೀವು ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಕುಟುಂಬದ ಕೆಲವು ಸದಸ್ಯರು ಮನೆಯಲ್ಲಿಯೇ ಇರಬೇಕು, ಗಣೇಶನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗಬಾರದು.