Donkey milk : ಕತ್ತೆ ಹಾಲನ್ನು (Donkey milk) ಮಕ್ಕಳಿಗೆ ಕುಡಿಸಿದರೆ ಬುದ್ಧಿ ಚುರುಕಾಗುತ್ತೆ ಎಂದು ಹೇಳಲಾಗುತ್ತೆ. ಕತ್ತೆ ಹಾಲಿನ ಲಾಭ ನೋಡಿ ವಿಜಯನಗರ ಜಿಲ್ಲೆಯ ರೈತರು ಕತ್ತೆಗಳ ಖರೀದಿಗೆ (Buy a donkey) ಮುಗಿಬಿದ್ದಿದ್ದಾರೆ.
ಹೌದು, ಒಂದು ಲೀಟರ್ ಕತ್ತೆ ಹಾಲಿನ ಬೆಲೆ ₹2736. ಒಂದು ಕತ್ತೆ ದಿನಕ್ಕೆ 2 ಲೀ. ಹಾಲು ಕೊಡುತ್ತದೆ. ತಿಂಗಳಿಗೆ 60-70 ಸಾವಿರ ರೂ ಲಾಭ ಬರುತ್ತಿದೆ ಎಂದು ರೈತರು ತಿಳಿಸಿದ್ದಾರೆ. ಈಗಾಗಲೇ ಕತ್ತೆ ಖರೀದಿ, ಮಾರಾಟ ವಹಿವಾಟು ಭರ್ಜರಿ ನಡೆದಿದ್ದು, ಹೊರ ರಾಜ್ಯಗಳಿಂದ ಕತ್ತೆಗಳನ್ನು ಇಂಪೋರ್ಟ್ ಮಾಡಿಕೊಳ್ಳಲಾಗುತ್ತಿದೆಯಂತೆ.
ಇದನ್ನು ಓದಿ: ಇಂದು ಮೀನ ರಾಶಿಯಿಂದ ಮೇಷ ರಾಶಿಗೆ ಚಂದ್ರನ ಸಂಚಾರ; ಶುಭ ಮುಹೂರ್ತ, ಅಶುಭ ಮುಹೂರ್ತದ ಮಾಹಿತಿ ಇಲ್ಲಿದೆ!
ಕತ್ತೆ ಹಾಲು ಏಕೆ ದುಬಾರಿ ಗೊತ್ತಾ? Why is donkey milk expensive?
ಕತ್ತೆ ಹಾಲು ಹೆಚ್ಚಿನ ಖನಿಜ ಅಂಶಗಳನ್ನು ಹೊಂದಿದೆ. ಇನ್ನು ಕತ್ತೆ ಹಾಲು ಮುಖದ ಚರ್ಮದ ಸುಕ್ಕುಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ. ಇದು ಮೃದುವಾದ, ನಯವಾದ ಮತ್ತು ಪ್ರಕಾಶಮಾನವಾಗಿ ಹೊಳೆಯುವ ಚರ್ಮವನ್ನು ನೀಡುವಲ್ಲಿ ಸಹಕಾರಿ. ಆದರೆ ಕತ್ತೆ ಹಾಲು ಪಡೆಯುವುದು ಬಹಳ ಕಷ್ಟ. ಅಷ್ಟೆ ಅಲ್ಲದೆ ಕತ್ತೆ ಸಾಕುವ ರೈತರು ಸೀಮಿತವಾಗಿದ್ದಾರೆ. ಹಾಗಾಗಿಯೇ ಕತ್ತೆ ಹಾಲು ಬಹಳ ದುಬಾರಿಯಾಗಿದೆ.
ಇದನ್ನು ಓದಿ: ಇಂದು ಮಿಥುನ, ಕನ್ಯಾರಾಶಿ ಸೇರಿದಂತೆ ಈ ರಾಶಿಯವರಿಗೆ ವ್ಯಾಪಾರದಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ..!
ಡಾಂಕಿ ಬಿಸಿನೆಸ್ ಕಚೇರಿಗೆ ಬೀಗ
ಕತ್ತೆ ಮಾರಾಟ, ಅದರ ಹಾಲು ಖರೀದಿಗೆ ಟ್ರೇಡ್ ಲೈಸನ್ಸ್ ಹೊಂದಿರದ ಆಂಧ್ರಪ್ರದೇಶದ ಅನಂತಪುರ ಮೂಲದ ಜೆನ್ನಿಮಿಲ್ಕ್ ಕಂಪನಿಯ ಕಚೇರಿಗೆ ಅಧಿಕಾರಿಗಳ ತಂಡ ಬೀಗ ಜಡಿದಿದೆ.
ಕಳೆದ 3 ತಿಂಗಳಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕತ್ತೆಗಳ ಮಾರಾಟದ ಈ ಕಂಪನಿಯು ರೈತರು ಮತ್ತು ಸಾಕಣೆದಾರರಿಂದ ಲಕ್ಷ, ಲಕ್ಷ ಹಣ ಪಡೆದು ವಂಚಿಸುತ್ತಿದೆ ಎಂದು ಕೆಲ ರೈತ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದವು. ಅನುಮತಿ ಪಡೆದು ಕಾನೂನು ಪ್ರಕಾರ ಕಚೇರಿ ತೆರೆಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನು ಓದಿ: ರೈತರಿಗೆ ಸಿಹಿ ಸುದ್ದಿ…ಮೆಕ್ಕೆಜೋಳಕ್ಕೆ ಬಂಪರ್ ಬೆಲೆ