ನೀವು ಪಿಎಫ್ ಖಾತೆಯನ್ನು ಹೊಂದಿದ್ದೀರಾ? ಪಿಎಫ್ ಹಣವನ್ನು ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಕಡಿತಗೊಳಿಸಲಾಗುತ್ತಿದೆಯೇ? ಹಾಗಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು. ನೀವು 7 ಲಕ್ಷ ರೂ.ವರೆಗೆ ವಿಮಾ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು. ಇದಕ್ಕಾಗಿ ನೀವು ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ.
ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ (ಇಡಿಎಲ್ಐ ) ವಿಮಾ ಯೋಜನೆಯಡಿ ಪಿಎಫ್ ಚಂದಾದಾರರಿಗೆ 7 ಲಕ್ಷ ರೂ.ವರೆಗೆ ವಿಮೆ ಸಿಗುತ್ತದೆ. ಈ ಹಿಂದೆ ಗರಿಷ್ಠ ವಿಮಾ ರಕ್ಷಣೆ 6 ಲಕ್ಷ ರೂ. ವರೆಗೆ ಇತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಇದನ್ನು 7 ಲಕ್ಷ ರೂವರೆಗೆ ವಿಮಾ ರಕ್ಷಣೆಯನ್ನು ಹೆಚ್ಚಿಸಿದೆ.
ಪಿಎಫ್ ಖಾತೆದಾರರು ಅಪಘಾತ ಅಥವಾ ಅನಾರೋಗ್ಯದಿಂದ ಸತ್ತರೆ, ಆಗ ಅವರ ಕುಟುಂಬಗಳಿಗೆ ಈ ಪಿಎಫ್ ವಿಮಾ ಹಣ ಸಿಗುತ್ತದೆ. ಹಣವು ಪಿಎಫ್ ಖಾತೆ ನಾಮಿನಿಗೆ ಹೋಗುತ್ತದೆ. ನಾಮಿನಿ ಇಲ್ಲದಿದ್ದರೆ ಈ ಹಣ ಪಾಲುದಾರ ಅಥವಾ ಮಕ್ಕಳಿಗೆ ಸಿಗುತ್ತದೆ. ಕರೋನಾದಿಂದ ಸತ್ತರೂ ಈ ಹಣ ಬರುತ್ತದೆ.
ಬೇಸಿಕ್ ಸ್ಯಾಲರಿ, ಡಿಎಗೆ 35 ಪಟ್ಟು ಈ ವಿಮೆಯನ್ನು ಪಡೆಯಬಹುದು. ಬೋನಸ್ ಅಡಿಯಲ್ಲಿ ಗರಿಷ್ಠ 1.75 ಲಕ್ಷ ರೂವರೆಗೂ ಪಡೆಯಬಹುದು. ಉದಾಹರಣೆಗೆ, ನೀವು ಬೇಸಿಕ್ ಮತ್ತು ಡಿಎಗ 15,000 ರೂಗಳು ಎಂದುಕೊಂಡರೆ, ಆಗ ನೀವು ವಿಮೆಯ ಅಡಿಯಲ್ಲಿ 5.25 ಲಕ್ಷ ರೂ. ಮತ್ತು ಬೋಸಾನ್ 1.75 ಲಕ್ಷ ರೂ ಸೇರಿದಂತೆ ಒಟ್ಟು 7 ಲಕ್ಷ ರೂ.ಗೆ 1.75 ಲಕ್ಷ ರೂ ಸಿಗುತ್ತದೆ.