ಸೂರ್ಯಗ್ರಹಣಕ್ಕೆ ವಿಜ್ಞಾನ, ಧರ್ಮ ಮತ್ತು ಜ್ಯೋತಿಷ್ಯದಲ್ಲಿಯೂ ಹೆಚ್ಚಿನ ಪ್ರಾಮುಖ್ಯತೆಯಿದ್ದು, ಇದೇ ಮಂಗಳವಾರ ಸಹ ಸೂರ್ಯಗ್ರಹಣ ಗೋಚರವಾಗಲಿದೆ. ಇದರೊಂದಿಗೆ ಶನಿಚಾರಿ ಅಮವಾಸ್ಯೆ ಕೂಡಾ ಇದೇ ದಿನ ಬರಲಿದ್ದು, ಇದರಿಂದಾಗಿ ಈ ಗ್ರಹಣದ ಮಹತ್ವ ಹಲವು ಪಟ್ಟು ಹೆಚ್ಚಿದ್ದು, ಈ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
ಗ್ರಹಣದ ಸಮಯದಲ್ಲಿ ಏನು ಮಾಡಬೇಕು:
*ಆಹಾರ ಮತ್ತು ನೀರಿನಲ್ಲಿ ತುಳಸಿ ಎಲೆಗಳನ್ನು ಹಾಕಿ, ಇದರಿಂದ ಗ್ರಹಣದ ಋಣಾತ್ಮಕ ಪರಿಣಾಮವು ಅವುಗಳ ಮೇಲೆ ಬೀಳುವುದಿಲ್ಲ ಹಾಗು ಅವುಗಳನ್ನು ಗ್ರಹಣದ ನಂತರ ಕೂಡಾ ಸೇವಿಸಬಹುದು.
* ಮನೆಯ ದೇವರ ಕೋಣೆಯನ್ನು ಮುಚ್ಚಿ, ಈ ಸಮಯದಲ್ಲಿ, ದೇವಾಲಯಗಳ ಬಾಗಿಲುಗಳನ್ನು ಕೂಡಾ ಮುಚ್ಚಲಾಗುತ್ತದೆ.
* ಗ್ರಹಣದ ನಂತರ ಸ್ನಾನ ಮಾಡಿ ದಾನ ಧರ್ಮ ಮಾಡಬೇಕು. ಅದರಲ್ಲೂ, ವಿಶೇಷವಾಗಿ ಸ್ವಚ್ಛತಾ ಕಾರ್ಮಿಕರಿಗೆ ದಾನ ಮಾಡುವುದು ತುಂಬಾ ಒಳ್ಳೆಯದು ಎನ್ನಲಾಗುತ್ತದೆ.