ಬೆಂಗಳೂರು: ಅಲ್ಪ ಸಂಖ್ಯಾತರ ವೋಟರ್ ಐಡಿ ಕಲೆಕ್ಟ್ ಮಾಡುತ್ತಿದ್ದಾರೆ, ಮತದಾರರನ್ನು ತಡೆಯುವುದು ಅವರ ಉದ್ದೇಶವಾಗಿದೆ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ.
ನಾವು ಕಾಂಗ್ರೆಸ್ ಬಿಡಲು ಡಿಕೆಶಿ ಕಾರಣವೆಂಬ ಆರೋಪ ಸಂಬಂಧಿಸಿದಂತೆ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿದ್ದು, ಹಬ್ಬದ ದಿನ ನನ್ನ ಬಗ್ಗೆ ಮಾತನಾಡಿದ್ದಾರೆ, ಬಹಳ ಸಂತೋಷ. ಅವರಿಗೆ ಆದಷ್ಟು ಬೇಗ ಪ್ರಮೋಷನ್ ಸಿಗಲಿ. ನನ್ನ ಬಗ್ಗೆ ಮಾತನಾಡಿದರೆ ಅವರಿಗೆ ಪ್ರಚಾರ ಸಿಗುತ್ತದೆ.
ನನಗೆ ಮತ್ತು ಸಿದ್ದರಾಮಯ್ಯಗೆ ಅವರಿಗೆ ಮಾರ್ಕೆಟ್ ನಲ್ಲಿ ಒಳ್ಳೆ ಬೆಲೆ ಇದೆ. ನನ್ನ ಬಗ್ಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದ್ರೆ ಪ್ರಚಾರ ಸಿಗುತ್ತೆ. ಹೀಗಾಗಿ ನಮ್ಮ ಬಗ್ಗೆ ಮಾತನಾಡುತ್ತಾರೆ ಅವರಿಗೆ ಒಳ್ಳೆಯದಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಮುನಿರತ್ನಗೆ ತಿರುಗೇಟು ನೀಡಿದ ಡಿಕೆಶಿ:
ಇನ್ನು ಕಾಂಗ್ರೆಸ್ ನಲ್ಲಿ 64 ಶಾಸಕರು ಸಿದ್ದರಾಮಯ್ಯ ಜೊತೆ ಇದ್ದಾರೆ, ಡಿಕೆಶಿ ಜತೆ ಕುಣಿಗಲ್ ಶಾಸಕ ರಂಗನಾಥ್ ಮಾತ್ರ ಇದ್ದಾರೆ ಎಂಬ ಮುನಿರತ್ನ ಅವರ ಹೇಳಿಕೆಗೆ ಡಿ.ಕೆ ಶಿವಕುಮಾರ್ ಅವರು “ನಾನು ಸಿದ್ದರಾಮಯ್ಯ ಅವರ ಜೊತೆಯೇ ಇದ್ದೇನೆ. ಸಿದ್ದರಾಮಯ್ಯ ಅವರೇ ನಮ್ಮ ಮುಂದಿನ ನಾಯಕ. ಸಿದ್ದರಾಮಯ್ಯ ಅವರೇ ಶಾಸಕಾಂಗ ಪಕ್ಷದ ನಾಯಕರು. ನಾನು ಸೇರಿದಂತೆ ಎಲ್ಲ ಶಾಸಕರು ಸಿದ್ದರಾಮಯ್ಯ ಅವರ ಜೊತೆಯೇ ಇದ್ದೇವೆ” ಎಂದು ಮುನಿರತ್ನ ಅವರಿಗೆ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ
ಇದನ್ನು ಓದಿ: ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರು; ಮಗ ಆರ್ ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ: ಸಿದ್ದರಾಮಯ್ಯ ಹೇಳಿಕೆ!