ವಿದ್ಯಾ ವಿಕಾಸ ಯೋಜನೆಯಡಿ ರಾಜ್ಯ ಶಿಕ್ಷಣ ಇಲಾಖೆ ಶೂ, ಸಾಕ್ಸ್ ವಿತರಣೆಗೆ ಮುಂದಾಗಿದ್ದು, ₹132 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಸರ್ಕಾರಿ ಶಾಲೆಗಳ ಸುಮಾರು 45 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.
ವಿದ್ಯಾರ್ಥಿಗಳ ಅಳತೆಗೆ ತಕ್ಕಂತೆ 1-5ನೇ ತರಗತಿಯ ಮಕ್ಕಳಿಗೆ ತಲಾ 265 ರೂ, 6-8ನೇ ತರಗತಿಯ ಮಕ್ಕಳಿಗೆ ₹295 ಮತ್ತು 9-10 ನೇ ತರಗತಿಯ ಮಕ್ಕಳಿಗೆ ತಲಾ ₹325ಬಳಸಲು ನಿಗದಿಪಡಿಸಲಾಗಿದ್ದು, ತಾಲೂಕುವಾರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ 204 ತಾ|ಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, 15 ದಿನದಲ್ಲಿ ಎಲ್ಲ ಶಾಲೆಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಿಸಲಾಗುವುದು. ಬೈಸಿಕಲ್ ವಿತರಣೆ ಬಗ್ಗೆ ತೀರ್ಮಾನಿಸಿಲ್ಲ ಎಂದಿದ್ದಾರೆ.