ಸೆಕ್ಷನ್ IPC-124 ಮೋದಿ-ಶಾ ಜೋಡಿಗಳ ಮಾರಕಾಸ್ತ್ರವಾಗಿದೆ: ದಿನೇಶ್ ಗುಂಡೂರಾವ್ ಆಕ್ರೋಶ

ಬೆಂಗಳೂರು: ಟೂಲ್‌ಕಿಟ್ ಬಗ್ಗೆ ಇಂದು ಆಕಾಶ ಸೂರು ಒಂದು ಮಾಡುತ್ತಿರುವ ಬಿಜೆಪಿ ನಾಯಕರು, ‘ಲೋಕಪಾಲ’ ಮಸೂದೆ ಪ್ರತಿಭಟನೆಯಲ್ಲಿ ಬಳಸಿಕೊಂಡಿದ್ದೇನು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ…

dinesh gundu rao vijayaprabha

ಬೆಂಗಳೂರು: ಟೂಲ್‌ಕಿಟ್ ಬಗ್ಗೆ ಇಂದು ಆಕಾಶ ಸೂರು ಒಂದು ಮಾಡುತ್ತಿರುವ ಬಿಜೆಪಿ ನಾಯಕರು, ‘ಲೋಕಪಾಲ’ ಮಸೂದೆ ಪ್ರತಿಭಟನೆಯಲ್ಲಿ ಬಳಸಿಕೊಂಡಿದ್ದೇನು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ದೇಶದ್ರೋಹದ ವ್ಯಾಖ್ಯಾನ ನೀಡುವ IPC124 ಮೋದಿ-ಶಾ ಜೋಡಿಗಳ ಮಾರಕಾಸ್ತ್ರವಾಗಿದೆ. ತಮ್ಮ ವಿರುದ್ಧ ರಚನಾತ್ಮಕವಾಗಿ ಪ್ರತಿಭಟಿಸಿದವರನ್ನೂ ಈ ಜೋಡಿ ಸೆಕ್ಷನ್124 ಅಸ್ತ್ರ ಪ್ರಯೋಗಿಸಿ ದಮನ ಮಾಡುವ ಕಾರ್ಯ ಮಾಡುತ್ತಿದೆ. ವಿಶ್ವದ ದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದೇ ದೇಶದ್ರೋಹವೆಂಬುದು ಪ್ರಜಾಪ್ರಭುತ್ವದ ಅಣಕ.

ಸರ್ಕಾರದ ವಿರುದ್ಧ ಪ್ರತಿಭಟಿಸಿದವರ ಮೇಲೆಲ್ಲಾ ದೇಶದ್ರೋಹಿ ಕೇಸ್ ಹಾಕುವುದಾದರೆ, ಕೇಂದ್ರ ಸರ್ಕಾರ ತಮ್ಮದೇ ಪಕ್ಷದ ಸುಬ್ರಹ್ಮಣ್ಯ ಸ್ವಾಮಿ ವಿರುದ್ಧವೂ ದೇಶದ್ರೋಹದ ಕೇಸ್ ದಾಖಲಿಸಲಿದೆಯೇ? ಯಾಕೆಂದರೆ ಇತ್ತೀಚೆಗೆ ಕೇಂದ್ರದ ಜನ ವಿರೋಧಿ ನೀತಿಯನ್ನು ಸುಬ್ರಮಣ್ಯ ಸ್ವಾಮಿಯವರು ಪದೇ ಪದೇ ಟೀಕಿಸಿ ಪ್ರತಿಭಟಿಸಿದ್ದಾರೆ. ಅವರಿಗೆ ಯಾವ ಪಟ್ಟ?

Vijayaprabha Mobile App free

ಟೂಲ್‌ಕಿಟ್ ಬಗ್ಗೆ ಇಂದು ಆಕಾಶ ಸೂರು ಒಂದು ಮಾಡುತ್ತಿರುವ ಬಿಜೆಪಿ ನಾಯಕರು ‘ಲೋಕಪಾಲ’ ಮಸೂದೆ ಪ್ರತಿಭಟನೆಯಲ್ಲಿ ಬಳಸಿಕೊಂಡಿದ್ದೇನು? ಅಂದು ಟೂಲ್‌ಕಿಟ್ ಬಳಸಿ ಚಳವಳಿಯ ರೂಪುರೇಷೆ ಮಾಡಿದ್ದು ದೇಶದ್ರೋಹವಾಗಿರಲಿಲ್ಲವೆ. ಬಿಜೆಪಿಯವರ ಪ್ರಕಾರ, ತಾವು ತಿಂದರೆ‌ ಮಾತ್ರ ಅದು ಮೃಷ್ಟಾನ, ಬೇರೆಯವರು ತಿಂದರೆ ಅದು ತಂಗಳನ್ನವೇ.?

ಒಂದು ಪ್ರತಿಭಟನೆ ಹಾಗೂ ಟೀಕೆಯನ್ನು ಸೈದಾಂತಿಕವಾಗಿ ಹಾಗೂ ನೈತಿಕವಾಗಿ ಎದುರಿಸಲಾಗದ ಸರ್ಕಾರವೊಂದು ಅನುಸರಿಸುವ ಹೇಡಿಯ ಮಾರ್ಗವೇ ದೇಶದ್ರೋಹದ ಕೇಸ್. ಸದ್ಯ ಕೇಂದ್ರ ಸರ್ಕಾರವೂ ಇದೇ ಹೇಡಿ ಮಾರ್ಗ ಅನುಸರಿಸಿ ಪ್ರತಿಭಟನೆಯ ದನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಈ ಸರ್ಕಾರದ ಅಂತ್ಯದ ಆರಂಭವಷ್ಟೆ ಎಂದು ಗುಂಡೂರಾವ್ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.