ಬೆಂಗಳೂರು: ಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಕಡ್ಡಾಯ ಮಾಡಬೇಕೆಂಬ ಒತ್ತಾಯ ಗಾಳಿಗೆ ತೂರಲಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂಬ ಒತ್ತಾಯ ಇಂದು ನಿನ್ನೆಯದಲ್ಲ. ಹಿಂದಿ/ಇಂಗ್ಲೀಷ್ ಭಾಷೆಯಲ್ಲಿ ಮಾತ್ರ IBPS ಪರೀಕ್ಷೆ ಬರೆಯಲು ಅವಕಾಶವಿರುವುದು ಸರಿಯಲ್ಲ. ಇದು ಪ್ರಾದೇಶಿಕ ಪ್ರಾಂತ್ಯದ ಅಭ್ಯರ್ಥಿಗಳಿಗೆ ಹುದ್ದೆ ಪಡೆಯುವ ಅವಕಾಶ ಕಿತ್ತುಕೊಂಡಂತಾಗುತ್ತದೆ.
IBPS ಪರೀಕ್ಷೆಗೆ ಸಂವಿಧಾನದ ಪರಿಚ್ಛೇದದಲ್ಲಿರುವ 13 ಭಾಷೆಗಳಿಗೂ ಅವಕಾಶ ಕೊಡುವುದಾಗಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭರವಸೆ ನೀಡಿದ್ದರು.ಈಗ SBI ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಸ್ಥಳೀಯರಿಗೆ ಆದ್ಯತೆಯಿಲ್ಲದಂತಾಗಿದೆ. ಜೊತೆಗೆ ಕನ್ನಡವನ್ನು ಕಡ್ಡಾಯ ಮಾಡಬೇಕೆಂಬ ಒತ್ತಾಯ ಗಾಳಿಗೆ ತೂರಲಾಗಿದೆ. ಇದು ಪ್ರಾದೇಶಿಕ ಅಸಮಾನತೆಗೆ ಕಾರಣವಾಗಲಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
1
ಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂಬ ಒತ್ತಾಯ ಇಂದು ನಿನ್ನೆಯದಲ್ಲ.
ಹಿಂದಿ/ಇಂಗ್ಲೀಷ್ ಭಾಷೆಯಲ್ಲಿ ಮಾತ್ರ #IBPS ಪರೀಕ್ಷೆ ಬರೆಯಲು ಅವಕಾಶವಿರುವುದು ಸರಿಯಲ್ಲ.
ಇದು ಪ್ರಾದೇಶಿಕ ಪ್ರಾಂತ್ಯದ ಅಭ್ಯರ್ಥಿಗಳಿಗೆ ಹುದ್ದೆ ಪಡೆಯುವ ಅವಕಾಶ ಕಿತ್ತುಕೊಂಡಂತಾಗುತ್ತದೆ. pic.twitter.com/aEGACU6qfM— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 19, 2020