ಬಡವರ ಸವಲತ್ತು ಕಿತ್ತುಕೊಳ್ಳಲು ಸರ್ಕಾರವೇ ಹೂಡುತ್ತಿರುವ ಹುನ್ನಾರವಿದು: ಉಮೇಶ್ ಕತ್ತಿ ವಿರುದ್ಧ ದಿನೇಶ್ ಗುಂಡೂರಾವ್ ಆಕ್ರೋಶ

ಬೆಂಗಳೂರು: ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವದು ಎಂಬ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಸಂಬಂಧಿಸಿದಂತೆ, ಬಡವರ ಸವಲತ್ತು ಕಿತ್ತುಕೊಳ್ಳಲು ಸರ್ಕಾರವೇ ಹೂಡುತ್ತಿರುವ…

dinesh gundu rao vijayaprabha

ಬೆಂಗಳೂರು: ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವದು ಎಂಬ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಸಂಬಂಧಿಸಿದಂತೆ, ಬಡವರ ಸವಲತ್ತು ಕಿತ್ತುಕೊಳ್ಳಲು ಸರ್ಕಾರವೇ ಹೂಡುತ್ತಿರುವ ಹುನ್ನಾರ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, TV/ಬೈಕ್ ಇದ್ದರೆ BPLಕಾರ್ಡ್ ರದ್ದು ಮಾಡುವ ಉಮೇಶ್ ಕತ್ತಿಯವರ ಹೇಳಿಕೆ ಬಡತನದ ಬದಲು ಬಡವರನ್ನೇ ನಿರ್ಮೂಲನ ಮಾಡುವ ಮನಸ್ಥಿತಿಯ ಪ್ರತೀಕ. ಸಾವಿಲ್ಲದ ಮನೆಯ ಸಾಸಿವೆ ಕಾಳು ತರಲು ಹೇಗೆ ಸಾಧ್ಯವಿಲ್ಲವೋ,ಇಂದು TV ಇಲ್ಲದ ಮನೆಯನ್ನು ಹುಡಕಲು ಅಸಾಧ್ಯ. ಸರ್ಕಾರ BPLಕಾರ್ಡ್ ನೀಡುವ ಮಾನದಂಡ‌ ಮೊದಲು ಬದಲಾಯಿಸಿಕೊಳ್ಳಲಿ.

BPL ಕಾರ್ಡ್ ನೀಡಲು ಕುಟುಂಬದ ಆದಾಯ ಮಾನದಂಡವಾಗಬೇಕೆ ಹೊರತು ಟಿವಿ ಬೈಕ್‌ಗಳಲ್ಲ. ಉಮೇಶ್ ಕತ್ತಿಯವರ ಹೇಳಿಕೆ ಈ ಸರ್ಕಾರಕ್ಕೆ ಬಡವರ ಮೇಲೆ ಎಷ್ಟು ಕಾಳಜಿ ಇದೆ ಎಂದು ತೋರಿಸುತ್ತಿದೆ. ಬಡವರ ಸವಲತ್ತು ಕಿತ್ತುಕೊಳ್ಳಲು ಸರ್ಕಾರವೇ ಹೂಡುತ್ತಿರುವ ಹುನ್ನಾರವಿದು. ರಾಜ್ಯ ಬಿಜೆಪಿ ತಮ್ಮದು ಬಡವರ ಪರ ಸರ್ಕಾರ ಎಂದು ಹೇಳಲು ಯಾವ ನಾಲಿಗೆಯಿದೆ? ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.