ಮೋದಿ ಸರ್ಕಾರ ರಾಷ್ಟ್ರಧ್ವಜವನ್ನೂ ಮಾರಾಟ ಮಾಡಿ ಸಂಪಾದಿಸುವ ದರಿದ್ರ ಸ್ಥಿತಿಗೆ ತಲುಪಿದ್ದು, ದುಡ್ಡಿಗೆ ರಾಷ್ಟ್ರಧ್ವಜ ಮಾರುವುದು ಯಾವ ದೇಶಾಭಿಮಾನದ ಸಂಕೇತ ಎಂದು ಮೋದಿ ಸರ್ಕಾರದ ವಿರುದ್ಧ ಶಾಸಕ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಡಿಯುವ ದಿನೇಶ್ ಗುಂಡೂರಾವ್ , ಮೋದಿಯವರಿಗೆ ಹರ್ ಘರ್ ತಿರಂಗ (HarGharTiranga) ಹೆಸರಿನಲ್ಲಿ ನಕಲಿ ದೇಶಾಭಿಮಾನ ತೋರಿಸುವ ತೆವಲು ಶುರುವಾಗಿದೆ. ನೈಜ ದೇಶಾಭಿಮಾನ ಇದ್ದವರು ರಾಷ್ಟ್ರಧ್ವಜ ಮಾರಾಟ ಮಾಡುವುದಿಲ್ಲ. ಧ್ವಜ ಖರೀದಿಸದವರಿಗೆ ಪಡಿತರ ನಿರಾಕರಿಸುವುದು, ರೈಲ್ವೇ ನೌಕರ ಸಂಬಳದಲ್ಲಿ ₹22ಕಡಿತ ಮಾಡುವುದು, ಈ-ಪೋಸ್ಟ್ ಮೂಲಕ ₹25 ಶುಲ್ಕ ವಿಧಿಸುವುದರಿಂದ ದೇಶ ಪ್ರೇಮ ಹುಟ್ಟಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.
ಮೋದಿ ಸರ್ಕಾರ ರಾಷ್ಟ್ರಧ್ವಜವನ್ನೂ ಮಾರಾಟ ಮಾಡಿ ಸಂಪಾದಿಸುವ ದರಿದ್ರ ಸ್ಥಿತಿಗೆ ತಲುಪಿದೆ. ಇಂದು ರಾಷ್ಟ್ರಧ್ವಜವನ್ನೇ ಮಾರುವವರು ಮುಂದೆ ದೇಶ ಮಾರುವುದಿಲ್ಲವೆ? 70 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಲೆ ಕಾಂಗ್ರೆಸ್ ಕಟ್ಟಿದ ಎಲ್ಲಾ ಸಂಸ್ಥೆಗಳನ್ನು ಖಾಸಗೀಕರಣದ ನೆಪದಲ್ಲಿ ಮಾರಿದ್ದಾರೆ. ಈಗ ರಾಷ್ಟ್ರಧ್ವಜವನ್ನೂ ಬಿಡುತಿಲ್ಲ.
ದುಡ್ಡಿಗೆ ರಾಷ್ಟ್ರಧ್ವಜ ಮಾರುವುದು ಯಾವ ದೇಶಾಭಿಮಾನದ ಸಂಕೇತ? ದೇಶಾಭಿಮಾನ ಬೀದಿಯಲ್ಲಿ ಮಾರಾಟವಾಗುವ ಸರಕಾಗಿದೆಯೇ? ಇನ್ನು,, ಈಗಾಗಲೇ PM cares ನಲ್ಲಿ ಜನರ ಲಕ್ಷಾಂತರ ಕೋಟಿ ಹಣ ದೋಚಲಾಗಿದೆ. ಈಗ ರಾಷ್ಟ್ರಧ್ವಜದಲ್ಲೂ ದುಡ್ಡು ಮಾಡುವ ಹೀನ ಬುದ್ಧಿ ಯಾಕೆ? ಮೋದಿಯವರಿಗೆ ದೇಶಾಭಿಮಾನ ಹೃದಯದಲ್ಲಿದ್ದರೆ ರಾಷ್ಟ್ರಧ್ವಜವನ್ನು ಪುಕ್ಕಟೆ ಕೊಡಲು ಏನು ರೋಗ? ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
1#Modi ಯವರಿಗೆ #HarGharTiranga ಹೆಸರಿನಲ್ಲಿ ನಕಲಿ ದೇಶಾಭಿಮಾನ ತೋರಿಸುವ ತೆವಲು ಶುರುವಾಗಿದೆ.
ನೈಜ ದೇಶಾಭಿಮಾನ ಇದ್ದವರು ರಾಷ್ಟ್ರಧ್ವಜ ಮಾರಾಟ ಮಾಡುವುದಿಲ್ಲ. ಧ್ವಜ ಖರೀದಿಸದವರಿಗೆ ಪಡಿತರ ನಿರಾಕರಿಸುವುದು,ರೈಲ್ವೇ ನೌಕರ ಸಂಬಳದಲ್ಲಿ ₹22ಕಡಿತ ಮಾಡುವುದು, ಈ-ಪೋಸ್ಟ್ ಮೂಲಕ ₹25 ಶುಲ್ಕ ವಿಧಿಸುವುದರಿಂದ ದೇಶ ಪ್ರೇಮ ಹುಟ್ಟಲು ಸಾಧ್ಯವೆ? pic.twitter.com/HRhVWKKoBi— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 11, 2022