ಸಿದ್ದರಾಮಯ್ಯರ ಮುಂದಾಳತ್ವದಲ್ಲೇ ಕೆಲಸ; ಸರ್ವಜನಾಂಗ, ಸರ್ವ ಧರ್ಮಕ್ಕೂ ಅವರೇ ನಾಯಕ: ಡಿಕೆಶಿ

ದಾವಣಗೆರೆ: ಸ್ವಾತಂತ್ರ್ಯ ಬಂದು 75 ವರ್ಷ ಆಗಿರುವಾಗ ಸಿದ್ದರಾಮಯ್ಯರ ಜನ್ಮದಿನ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ದಾವಣಗೆರೆ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಕ್ತಿಯೇ ಈ ದೇಶಕ್ಕೆ…

dk-shivakumar-vijayaprabha

ದಾವಣಗೆರೆ: ಸ್ವಾತಂತ್ರ್ಯ ಬಂದು 75 ವರ್ಷ ಆಗಿರುವಾಗ ಸಿದ್ದರಾಮಯ್ಯರ ಜನ್ಮದಿನ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ದಾವಣಗೆರೆ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಕ್ತಿಯೇ ಈ ದೇಶಕ್ಕೆ ಶಕ್ತಿ. ಸಿದ್ದರಾಮಯ್ಯರನ್ನು ಹೈಕಮಾಂಡ್ ಸಿಎಂ ಮಾಡಿದರು. ಬಸವ ಜಯಂತಿಯಂದು ಸಿದ್ದು ಅಧಿಕಾರಕ್ಕೇರಿದರು. ಬಸವಣ್ಣನವರ ತತ್ವವೇ ಕಾಂಗ್ರೆಸ್ ತತ್ವ. 2013ರಿಂದ ಇಲ್ಲಿಯವರೆಗೆ ಸಿದ್ದು ಅವರ ಕಾರ್ಯಕ್ರಮಗಳನ್ನು ಮೆಲುಕು ಹಾಕುತ್ತಿದ್ದೇವೆ ಎಂದಿದ್ದಾರೆ.

ಸಿದ್ದರಾಮಯ್ಯರ ಮುಂದಾಳತ್ವದಲ್ಲೇ ಕೆಲಸ: ಡಿಕೆಶಿ

Vijayaprabha Mobile App free

ಸಿದ್ದರಾಮಯ್ಯರ ಮುಂದಾಳತ್ವದಲ್ಲೇ ಕೆಲಸ ಮಾಡಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಹೌದು, ಅಧಿಕಾರ ಸ್ವೀಕರಿಸಿದ ಒಂದೇ ಗಂಟೆಯಲ್ಲಿ ರಾಜ್ಯದ ಯಾರೊಬ್ಬರೂ ಹಸಿವಿನಿಂದ ಬಳಲಬಾರದೆಂದು ‘ಅನ್ನಭಾಗ್ಯ’ ಘೋಷಿಸಿದ ದೇಶದ ಏಕೈಕ ನಾಯಕ ಸಿದ್ದರಾಮಯ್ಯ. ಅವರನ್ನು ಹಿಂದುಳಿದ ವರ್ಗಗಳ ನಾಯಕ ಎಂದು ಬಿಂಬಿಸಬೇಡಿ. ಸರ್ವಜನಾಂಗ, ಸರ್ವ ಧರ್ಮಕ್ಕೂ ಅವರೇ ನಾಯಕರು ಎಂದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.