ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ರಾಸಲೀಲೆ ನಡೆಸಿ, ವಿಡಿಯೋ ಚಾಟ್ ನಡೆಸಿದ್ದಳು ಎನ್ನಲಾದ ಯುವತಿ ಬೆಂಗಳೂರಿನ ಆರ್.ಟಿ.ನಗರದಲ್ಲೇ ಇದ್ದಾಳೆ ಎಂದು ಹೇಳಲಾಗುತ್ತಿದೆ.
ವಿಡಿಯೋದಲ್ಲಿರುವ ಯುವತಿಯ ಮುಖ ಚಹರೆಯನ್ನೇ ಹೋಲುವ ಯುವತಿಯೊಬ್ಬಳು ಆರ್.ಟಿ.ನಗರದ ಖಾಸಗಿ ಹೋಟೆಲ್ ನಲ್ಲಿ ತನ್ನ ಸ್ನೇಹಿತನೊಬ್ಬನೊಂದಿಗೆ ಓಡಾಡಿದ್ದಾಳೆ. ಈ ಸಂಬಂಧಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಖಚಿತವಾಗಿ ಆಕೆಯೇ ಎಂಬ ಬಗ್ಗೆ ಪೊಲೀಸರಿಗೂ ಅನುಮಾನವಿದೆ. ಇನ್ನು ಈ ಪ್ರಕರಣ ಬಯಲಿಗೆ ಬಯಲಿಗೆ ಬರುತ್ತುದಂತೆ ಯುವತಿ ದುಬೈಗೆ ಹಾರಿದ್ದಾಳೆ ಎನ್ನಲಾಗುತ್ತಿತ್ತು.
ಇನ್ನು ರಾಸಲೀಲೆ ಪ್ರಕರಣವನ್ನು ಬಹಿರಂಗ ಪಡಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಇತ್ತೀಚಿಗೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಇಂಪಡೆಯಲು ನಿರ್ಧರಿಸಿದ್ದರು. ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿದೆ.