ನವದೆಹಲಿ: ಗೂಗಲ್ ಗೆ ಸೆಡ್ಡು ಹೊಡೆದಿರುವ ಕೇಂದ್ರ ಸರ್ಕಾರ ದೇಶಿ ಮೊಬೈಲ್ ಸೇವಾ ಆ್ಯಪ್ ಸ್ಟೋರ್ ಆ್ಯಪ್ ಬಿಡುಗಡೆ ಮಾಡಿದೆ.
ಗೂಗಲ್, ಆ್ಯಪ್ ಮೊದಲಾದ ಕಂಪನಿಗಳ ಏಕಸ್ವಾಮ್ಯ, ಸರ್ವಾಧಿಪತ್ಯಕ್ಕೆ ಟಾಂಗ್ ಕೊಡಲು ಗೂಗಲ್ ಪ್ಲೇಸ್ಟೋರ್,ಆ್ಯಪ್ ಸ್ಟೋರ್ ಗೆ ಸೆಡ್ಡು ಹೊಡೆಯಲು ದೇಶಿ ಆ್ಯಪ್ ಡೆವಲೆಪ್ ಮಾಡಲಾಗಿದ್ದು, ನೂತನವಾಗಿ ಅಭಿವೃದ್ಧಿಪಡಿಸಲಾದ ಮೊಬೈಲ್ ಸೇವಾ ಆ್ಯಪ್ ಸ್ಟೋರ್ ಆ್ಯಪ್ ಅನ್ನು ಕೇಂದ್ರ ಸರ್ಕಾರ ಬಿಡುಡಗೆ ಮಾಡಿದೆ.
ರಾಜ್ಯಸಭೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಈ ಬಗ್ಗೆ ಮಾತನಾಡಿ, ನೂತನ ಮೊಬೈಲ್ ಸೇವಾ ಆಪ್ ಸ್ಟೋರ್ ಆಪ್ ನಿಂದ ಗೂಗಲ್, ಪ್ಲೇ ಸ್ಟೋರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದಾಗಿದ್ದು, ಇದರಿಂದ ಮೇಕ್ ಇನ್ ಇಂಡಿಯಾಗೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದ್ದಾರೆ.