ಸ್ಮಾರ್ಟ್ ಫೋನ್ ಬಳಕೆದಾರರಿಗೆ ಒಳ್ಳೆಯ ಸುದ್ದಿ; ಕೇಂದ್ರದ ಮಹತ್ವದ ನಿರ್ಧಾರ!

ಸ್ಮಾರ್ಟ್ ಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಟೆಲಿಕಾಂ ಇಲಾಖೆ (ಡಾಟ್) ಮಂಗಳವಾರ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಟೆಲಿಕಾಂ ಕಂಪನಿಗಳಿಗೆ 5 ಜಿ ತಂತ್ರಜ್ಞಾನ ಪ್ರಯೋಗಗಳನ್ನು ನಡೆಸಲು ಅನುಮೋದನೆ…

mobile phone vijayaprabha news

ಸ್ಮಾರ್ಟ್ ಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಟೆಲಿಕಾಂ ಇಲಾಖೆ (ಡಾಟ್) ಮಂಗಳವಾರ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಟೆಲಿಕಾಂ ಕಂಪನಿಗಳಿಗೆ 5 ಜಿ ತಂತ್ರಜ್ಞಾನ ಪ್ರಯೋಗಗಳನ್ನು ನಡೆಸಲು ಅನುಮೋದನೆ ನೀಡಿದೆ.

ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಮತ್ತು ಎಂಟಿಎನ್‌ಎಲ್ 5 ಜಿ ಪ್ರಯೋಗಗಳಿಗೆ ಅರ್ಜಿ ಸಲ್ಲಿಸಿವೆ. ಇದಕ್ಕಾಗಿ ಡಾಟ್ ಅನುಮತಿಯನ್ನು ನೀಡಿದೆ. ಈ ಟೆಲಿಕಾಂ ಕಂಪನಿಗಳು ಮೂಲ ಉಪಕರಣ ತಯಾರಕರು ಮತ್ತು ತಂತ್ರಜ್ಞಾನ ಪೂರೈಕೆದಾರರ ಸಹಭಾಗಿತ್ವದಲ್ಲಿ 5 ಜಿ ಪ್ರಯೋಗಗಳನ್ನು ನಡೆಸುತ್ತವೆ.

ಅಂದರೆ ಟೆಲಿಕಾಂ ಕಂಪೆನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಎರಿಕ್ಸನ್, ನೋಕಿಯಾ, ಸ್ಯಾಮ್‌ಸಂಗ್ ಮತ್ತು ಸೆಡಾಟ್‌ನಂತಹ ಕಂಪನಿಗಳೊಂದಿಗೆ ಪಾಲುದಾರರಾಗಲಿದ್ದು, ಒಟ್ಟಾಗಿ ಸೇರಿ 5 ಜಿ ಪ್ರಯೋಗಗಳನ್ನು ನಡೆಸುತ್ತಾರೆ. 5 ಜಿ ಪ್ರಯೋಗಗಳಿಗೆ ಕೇಂದ್ರವು ಆರು ತಿಂಗಳ ಗಡುವು ನೀಡಿದೆ.

Vijayaprabha Mobile App free

ಇದಕ್ಕಾಗಿ ಮುಂದಿನ 2 ತಿಂಗಳುಗಳಲ್ಲಿ ಉಪಕರಣಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳು, ಅರೆ ನಗರ ಮತ್ತು ನಗರ ಪ್ರದೇಶಗಳಲ್ಲಿ ಇಂತಹ ಎಲ್ಲ ಸ್ಥಳಗಳಲ್ಲಿ 5 ಜಿ ಪ್ರಯೋಗಗಳನ್ನು ನಡೆಸಬೇಕು ಎಂದು ಕೇಂದ್ರವು ಷರತ್ತು ವಿಧಿಸಿದೆ. ಇದರೊಂದಿಗೆ, ಎಲ್ಲಾ ಪ್ರದೇಶಗಳಲ್ಲಿ 5 ಜಿ ಸೇವೆಗಳು ಲಭ್ಯವಿರುತ್ತವೆ. 5 ಜಿ ಸೇವೆಗಳು ಲಭ್ಯವಾದರೆ ಡೌನ್‌ಲೋಡ್ ವೇಗವು 4 ಜಿ ಗಿಂತ 10 ಪಟ್ಟು ವೇಗವಾಗಿರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.