ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 30 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ 13 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
162 ರನ್ ಗುರಿಯನ್ನು ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದೊಂದಿಗೆ 148 ರನ್ ಗಳಿಸಿ 13 ರನ್ ಗಳಿಂದ ಸೋಲಿಗೆ ಶರಣಾಯಿತು. ರಾಜಸ್ತಾನ್ ರಾಯಲ್ಸ್ ಪರ, ಬೆನ್ ಸ್ಟೋಕ್ಸ್ -41, ಜೋಸ್ ಬಟ್ಲರ್-22, ಸಂಜು ಸ್ಯಾಮ್ಸನ್ -25, ರಾಬಿನ್ ಉತ್ತಪ್ಪ -32 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ, ತುಷಾರ್ ದೇಶಪಾಂಡೆ, ಎನ್ರಿಚ್ ನೊರ್ಟ್ಜೆ ತಲಾ 2 ವಿಕೆಟ್, ಅಕ್ಸಾರ್ ಪಟೇಲ್, ಅಶ್ವಿನ್, ಹಾಗು ರಬಾಡ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಆಟಗಾರ ಶಿಖರ ಧವನ್-57, ನಾಯಕ ಶ್ರೇಯಸ್ ಅಯ್ಯರ್ -53, ಸ್ಟೋನಿಸ್-18 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತು. ರಾಜಸ್ತಾನ್ ರಾಯಲ್ಸ್ ಪರ, ಜೊಫ್ರಾ ಆರ್ಚರ್ 3 ವಿಕೆಟ್, ಜಯದೇವ ಉನದ್ಕತ್ 2 ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅಮೋಘ ಪ್ರದರ್ಶನ ನೀಡಿದ ಎನ್ರಿಚ್ ನೊರ್ಟ್ಜೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: 22 ವರ್ಷದ ನಂತರ ಮತ್ತೆ ಜೊತೆಯಾಗಲಿರುವ ‘ಜೀನ್ಸ್’ ಜೋಡಿ: ಖ್ಯಾತ ನಟಿ ತಬು ಪಾತ್ರದಲ್ಲಿ ಐಶ್ವರ್ಯ ರೈ…?