ಶಾರ್ಜಾ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 34 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ದ 5 ವಿಕೆಟ್ ಗಳ ರೋಚಕ ಗೆಲುವು ದಾಖಲಿಸಿದೆ.
280 ರನ್ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.5 ಓವರ್ ಗಳಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡು 185 ರನ್ ಗಳಿಸಿ 5 ರನ್ ವಿಕೆಟ್ ಗಳ ರೋಚಕ ಗೆಲುವು ದಾಖಲಿಸಿತು.. ಡೆಲ್ಲಿ ಪರ ಆರಂಭಿಕ ಆಟಗಾರ ಶಿಖರ್ ಧವನ್ -101* ಅವರ ಅಜೇಯ ಶತಕ, ಶ್ರೇಯಸ್ ಅಯ್ಯರ್-23, ಸ್ಟೋನಿಸ್-24, ಹಾಗು ಅಕ್ಸಾರ್ ಪಟೇಲ್-21* ರನ್ ಗಳಿಸಿದರು. ಚೆನ್ನೈ ಪರ, ದೀಪಕ್ ಚಾಹರ್ 2 ವಿಕೆಟ್, ಶಾರ್ದುಲ್ ಠಾಕೂರ್, ಡ್ವೇನ್ ಬ್ರಾವೊ ಹಾಗು ಸ್ಯಾಮ್ ಕರಣ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಗೆದ್ದು, ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ -58, ಶೇನ್ ವ್ಯಾಟ್ಸನ್-36, ಅಂಬಟಿ ರಾಯುಡು-45*, ಹಾಗೂ ರವೀಂದ್ರ ಜಡೇಜಾ-33* ಅವರ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತು. ಡೆಲ್ಲಿ ಪರ ಎನ್ರಿಚ್ ನೊರ್ಟ್ಜೆ 2, ರಬಾಡ, ದೇಶಪಾಂಡೆ ತಲಾ 1 ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಅಮೋಘ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶಿಖರ್ ಧವನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.