ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 59 ರನ್ ಗಳ ಸೋಲನುಭವಿಸಿದೆ.
197 ರನ್ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟದೊಂದಿಗೆ 137 ರನ್ ಗಳಿಸಿ 59 ರನ್ ಗಳಿಂದ ಸೋಲಿಗೆ ಶರಣಾಯಿತು. ಆರ್ ಸಿಬಿ ಪರ, ನಾಯಕ ವಿರಾಟ್ ಕೊಹ್ಲಿ-43, ಅರೋನ್ ಫಿಂಚ್-13, ಸುಂದರ್ -17 ರನ್ ಗಳಿಸಿದರು. ಡೆಲ್ಲಿ ಪರ, ಕಗಿಸೊ ರಬಾಡ 4, ಎನ್ರಿಚ್ ನೊರ್ಟ್ಜೆ, ಅಕ್ಸಾರ್ ಪಟೇಲ್ ತಲಾ 2 ವಿಕೆಟ್, ಆರ್ ಅಶ್ವಿನ್ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಆಟಗಾರ ಪೃಥ್ವಿ ಷಾ-42, ಶಿಖರ್ ಧವನ್-32, ರಿಷಬ್ ಪಂತ್-37, ಹಾಗೂ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್-53 ಅವರ ಭರ್ಜರಿ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು. ಆರ್ ಸಿಬಿ ಪರ, ಮೊಹಮ್ಮದ್ ಸಿರಾಜ್ 2, ಇಸುರು ಉದಾನ, ಮೋಹಿನ್ ಅಲಿ ತಲಾ ಒಂದು ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅಮೋಘ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ಎಸ್ಕಾಂ ಖಾಸಗೀಕರಣ; ಹರಪನಹಳ್ಳಿಯಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ