ಚೆನ್ನೈ : ಖ್ಯಾತ ಗಾಯಕ, ಗಾನಗಾರುಡಿಗ ಎಸ್.ಬಿ. ಬಾಲಸುಬ್ರಮಣ್ಯಂ ಅವರು ಇಂದು ವಿಧಿವಶರಾಗಿದ್ದಾರೆ. ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕಳೆದ 51 ದಿನಗಳಿಂದ ಬಾಲಸುಬ್ರಮಣ್ಯಂ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರನ್ನು ಆ.13ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ, ವೆಂಟಿಲೇಟರ್ ಅಳವಡಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.
ಭಾರತೀಯ ಚಿತ್ರರಂದಲ್ಲಿ ಹೆಸರಾಂತ ಗಾಯಕರಾಗಿದ್ದ ಎಸ್.ಬಿ. ಬಾಲಸುಬ್ರಮಣ್ಯಂ ಅವರು ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದರು. ಎಸ್.ಬಿ. ಬಾಲಸುಬ್ರಮಣ್ಯಂ ಅವರು ಕನ್ನಡದಲ್ಲಿ ಮುದ್ದಿನ ಮಾವ , ಮಂಗ್ಯಾಲಂ ತಂತು ನಾನೇನ, ಸೇರಿದಂತೆ ಹಲವು ಸಿನಿಮಾಗಳಲಿ ನಟಿಸಿದ್ದಾರೆ. ಎಸ್.ಬಿ. ಬಾಲಸುಬ್ರಮಣ್ಯಂ ಅವರ ನಿದನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೆ ಎಸ್ ಈಶ್ವರಪ್ಪ, ಶ್ರೀರಾಮುಲು, ಡಿ.ಕೆ. ಶಿವಕುಮಾರ್, ಮಾಜಿ ಪ್ರಧಾನಿ ಮಂತ್ರಿ ಎಚ್ ಡಿ ದೇವೇಗೌಡ ಮತ್ತು ಚಿತ್ರರಂಗೇಕ್ಕೆ ಸೇರಿದ ಅನೇಕ ಕಂಬನಿ ಮಿಡಿದಿದ್ದಾರೆ.
ಮಾಜಿ ಪ್ರಧಾನಿ ಮಂತ್ರಿ ಎಚ್ ಡಿ ದೇವೇಗೌಡ ಅವರು ಟ್ವೀಟ್ ಮಾಡಿ ಗಾನಗಾರುಡಿಗ ಎಸ್.ಬಿ. ಬಾಲಸುಬ್ರಮಣ್ಯಂ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
I am severely pained by the sad demise of renowned singer Shri. SP Balasubrahmanyam. Reaching the pinnacle of music in Kannada, Telugu, Tamil, Malayalam and Hindi is an unassailable achievement. This is a great loss to our nation, especially to the field of music.
— H D Devegowda (@H_D_Devegowda) September 25, 2020
ಮಾಜಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಗಾನಗಾರುಡಿಗ ಎಸ್.ಬಿ. ಬಾಲಸುಬ್ರಮಣ್ಯಂ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ
ಹಲವು ಭಾಷೆಗಳ ಚಿತ್ರಗಳಲ್ಲಿ ಹಾಡಿ, ದಶಕಗಳ ಕಾಲ ನಮ್ಮೆಲ್ಲರನ್ನು ರಂಜಿಸಿದ್ದ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಿಬಾರದ ನಷ್ಟ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/QDS8f4FUrv
— Siddaramaiah (@siddaramaiah) September 25, 2020
ಕೆಪಿಸಿಸಿ ಅದ್ಯಕ್ಸ್ಯ ಡಿ.ಕೆ ಶಿವಕುಮಾರ್ ಅವರು ಎಸ್.ಬಿ. ಬಾಲಸುಬ್ರಮಣ್ಯಂ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ
ಗಾನ ಗಾರುಡಿಗ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ.
ಅವರ ಮುಂದಾಳತ್ವದಲ್ಲಿ ದೀರ್ಘಕಾಲ ಮೂಡಿಬಂದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನು ವೀಕ್ಷಿಸುತಿದ್ದೆ. ಅವರ ಸರಳತೆ, ಸ್ಪರ್ಧಿಗಳನ್ನು ಹುರುದುಂಬಿಸುತ್ತಿದ್ದ ರೀತಿಗೆ ನಾನವರ ಅಭಿಮಾನಿಯಾಗಿದ್ದೆ.
ಇಂತಹ ಮಹಾನ್ ಗಾಯಕನಿಗೆ ನನ್ನ ಭಾವಪೂರ್ಣ ವಿದಾಯಗಳು. pic.twitter.com/gUe9pkFsxT
— DK Shivakumar (@DKShivakumar) September 25, 2020
ಖ್ಯಾತ ಗಾಯಕ ಶ್ರೀ S.P. ಬಾಲಸುಬ್ರಮಣ್ಯಂ ಅವರ ನಿಧನದ ವಾರ್ತೆ ತಿಳಿದು ಬೇಸರವಾಗಿದೆ. ಶ್ರೀಯುತರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ.
ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ.
— K S Eshwarappa (@ikseshwarappa) September 25, 2020
ಸಂಗೀತ ಲೋಕದ ಸ್ವರಮಾಂತ್ರಿಕ, 50 ವರ್ಷಗಳಿಗೂ ಹೆಚ್ಚಿನ ಕಾಲ ಬಹುಭಾಷಾ ಗಾಯಕನಾಗಿ ಅಭಿಮಾನಿಗಳನ್ನು ರಂಜಿಸಿದ ಗಾನಗಂಧರ್ವ #SPBalasubrahmanyam ನಮ್ಮನಗಲಿ ಹೋಗಿರುವುದು ಅತ್ಯಂತ ದುಃಖದ ವಿಚಾರ.
ಕೊನೆಗೂ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಲೇ ಇಲ್ಲ.
‘ಎಸ್ ಪಿಬಿ’ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ. pic.twitter.com/KhUzpkUmWT— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 25, 2020
ಭಾರತೀಯ ಚಿತ್ರರಂಗದ ಅದೆಷ್ಟೋ ನಟರ ಅಭಿನಯದಲ್ಲಿ ತಮ್ಮಧ್ವನಿಯ ಮೂಲಕ ಬೆರೆತಿದ್ದ ಗಾನಗಂಧರ್ವ ಶ್ರೀ ಡಾ.ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರುನಿಧನರಾಗಿರುವ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ.
ಶ್ರೇಷ್ಠ ಸಂಗೀತ ದಿಗ್ಗಜನಿಗೆ ಭಾವಪೂರ್ಣ ಶ್ರದ್ಧಾನಂಜಲಿ. ಅವರಕುಟುಂಬಸ್ಥರು, ಅಭಿಮಾನಿಗಳಿಗೆದುಃಖವನ್ನು ಭರಿಸುವ ಶಕ್ತಿಭಗವಂತ ನೀಡಲಿ.#ಓಂಶಾಂತಿ pic.twitter.com/uQfVVcHJhB
— Kourava B.C.Patil (@bcpatilkourava) September 25, 2020
ದೇಶ ಕಂಡ ಶ್ರೇಷ್ಠ ಗಾಯಕ, ಹಲವಾರು ಭಾಷೆಗಳಲ್ಲಿ ಹಾಡಿ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ ಹಾಡುಗಾರ, ನಟ, ಸಂಗೀತ ನಿರ್ದೇಶಕ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಕೊರೊನ ಸೋಂಕಿನೊಂದಿಗೆ ಸತತವಾಗಿ ಹೋರಾಡಿದ ಅವರು ಕೊನೆಗೂ ವಿಧಿಯ ಕರೆಗೆ ಓಗೊಟ್ಟು ಗಾಯನ ನಿಲ್ಲಿಸಿ ಚಿರಮೌನಕ್ಕೆ ಶರಣಾಗಿದ್ದಾರೆ. 1/2 pic.twitter.com/hvMHF0S66w
— B Sriramulu (@sriramulubjp) September 25, 2020
ಖ್ಯಾತ ಗಾಯಕರಾದ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ರವರು ನಿಧನರಾದ ಸುದ್ದಿ ತೀವ್ರ ಆಘಾತ ನೀಡಿದೆ.
ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಕೋರುತ್ತ, ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/qXjoH3JKzE
— GM Siddeshwara (@GMSBJP) September 25, 2020
ನಮ್ಮ ದೇಶ ಎಂದೂ ಮರೆಯದ ಶ್ರೇಷ್ಠ ಗಾಯಕರಾದ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಎಸ್.ಪಿ.ಬಿ ಅವರ ನಿಧನದಿಂದ ಸಂಗೀತ ಲೋಕದ ಅಮೂಲ್ಯವಾದ ಕೊಂಡಿ ಕಳಚಿದಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಅವರ ಅಭಿಮಾನಿಗಳಿಗೆ ಈ ಆಘಾತವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/DqSjWfKAAU
— Nikhil Kumar (@Nikhil_Kumar_k) September 25, 2020