‘ಒಮಿಕ್ರಾನ್ ಬಿಎಫ್ 7’ ನಿಂದ ಸಾವು ಸಂಭವಿಸುತ್ತಾ? ಒಮಿಕ್ರಾನ್ ಬಾರದಂತೆ ಈ ರೀತಿ ತಪ್ಪಿಸಿ

ಕೋವಿಡ್ ನ ರೂಪಾಂತರಿ ವೈರಸ್ ‘ಒಮಿಕ್ರಾನ್ ಬಿಎಫ್ 7’ ಭಾರತ ಸೇರಿದಂತೆ ಜಗತ್ತಿನಾದ್ಯಂತ ವೇಗವಾಗಿ ಹರಡಲು ಶುರುವಾಗಿದ್ದು, ಇದು ಅತ್ಯಂತ ಅಪಾಯಕಾರಿ ರೂಪಾಂತರಿ ತಳಿ ಎಂದು ಅರೋಗ್ಯ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಲಸಿಕೆ…

Omicron vijayaprabha news

ಕೋವಿಡ್ ನ ರೂಪಾಂತರಿ ವೈರಸ್ ‘ಒಮಿಕ್ರಾನ್ ಬಿಎಫ್ 7’ ಭಾರತ ಸೇರಿದಂತೆ ಜಗತ್ತಿನಾದ್ಯಂತ ವೇಗವಾಗಿ ಹರಡಲು ಶುರುವಾಗಿದ್ದು, ಇದು ಅತ್ಯಂತ ಅಪಾಯಕಾರಿ ರೂಪಾಂತರಿ ತಳಿ ಎಂದು ಅರೋಗ್ಯ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಲಸಿಕೆ ತೆಗೆದುಕೊಂಡ ನಂತರವೂ ಈ ವೈರಸ್ ತಗುಲುವ ಸಾಧ್ಯತೆ ಇದೆ. ಹಾಗಾಗಿ, ದೀರ್ಘಕಾಲದ ಕಾಯಿಲೆಗಳು, ಶ್ವಾಸಕೋಶ, ಉಸಿರಾಟದ ಕಾಯಿಲೆಗಳು, ಕ್ಯಾನ್ಸರ್ ಇರುವವರು ಈ ವೈರಸ್ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುವಂತೆ ತಜ್ಞರು ಸೂಚಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ ಸಾವು ಕೂಡ ಸಂಭವಿಸಬಹುದು.

ಒಮಿಕ್ರಾನ್ ಬಾರದಂತೆ ಈ ರೀತಿ ತಪ್ಪಿಸಿ

Vijayaprabha Mobile App free

‘ಒಮಿಕ್ರಾನ್ ವೈರಸ್ ನ ಹೊಸ ತಳಿ ಬಿಎಫ್ 7 ನ ಮೂರು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಆದ್ದರಿಂದ ಎಲ್ಲರೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ.

ವಿಟಮಿನ್ ಡಿ ಗಾಗಿ ದೈಹಿಕ ವ್ಯಾಯಾಮ ಮಾಡಿ ಮತ್ತು ಬೆಳಗ್ಗಿನ ಎಳೆ ಬಿಸಿಲಿನಲ್ಲಿ ನಡೆಯಿರಿ. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸಿ. ಸಸ್ಯಾಹಾರಿಗಳು ವಿಟಮಿನ್ ಬಿ 12 ತೆಗೆದುಕೊಳ್ಳಬೇಕು.

ಬಿಸಿ ನೀರು ಬಳಸಬೇಕು ಮತ್ತು ಬಿಸಿ ಆಹಾರ ಸೇವಿಸಬೇಕು. ತಣ್ಣಗಿನ ಆಹಾರಗಳನ್ನು ಆದಷ್ಟು ತ್ಯಜಿಸಿ. ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸಿ. ನೈರ್ಮಲ್ಯೀಕರಣದ ಮುನ್ನೆಚ್ಚರಿಕೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ. ನಿಮ್ಮಲ್ಲಿ ವೈರಸ್‌ನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿ ಉತ್ತಮ ಚಿಕಿತ್ಸೆ ಪಡೆಯಿರಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.