ಬೆಂಗಳೂರು : ನವಂಬರ್ 3 ರಂದು ಆರ್ ಆರ್ ನಗರ ಉಪಚುನಾವಣೆ ನಡೆಯಲಿದ್ದು ಬಿಜೆಪಿ ಅಭ್ಯರ್ಥಿ ನಿರ್ಮಾಪಕ ಮುನಿರತ್ನ ಅವರ ಪರ ಪ್ರಚಾರದಲ್ಲಿ ರ್ಯಾಲಿಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಚೆಲುವಿನ ಚಿತ್ತಾರ ಬೆಡಗಿ ನಟಿ ಅಮೂಲ್ಯ ಅವರು ಭಾಗಿಯಾಗಿ ಅಭಿಮಾನಿಗಳತ್ತ ಕೈಬೀಸಿ ಭರ್ಜರಿ ಮತಯಾಚನೆ ಮಾಡಿದರು.
ನಟ ದರ್ಶನ್ ಹಾಗು ನಟಿ ಅಮೂಲ್ಯ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದು, ಪ್ರಚಾರ ಮದ್ಯದಲ್ಲಿ ದರ್ಶನ ಗೆ ಮಹಿಳೆಯರು ಆರತಿ ಬೆಳಗಿದರು. ಬಾಲ್ಕನಿಯಲ್ಲಿ ನಿಂತಿದ್ದ ಜನರು ಕವರ್ ಗಳಲ್ಲಿ ಹೂವುಗಳನ್ನು ಇಟ್ಟುಕೊಂಡು ನಟ ದರ್ಶನ್ ಗೆ ಹೂವಿನ ಮಳೆಗೈದರು. ಈ ಸಂದರ್ಭದಲ್ಲಿ ನಟ ದರ್ಶನ್ ಹಾಗು ಅಮೂಲ್ಯ ಜೊತೆ ಪ್ರಚಾರ ರ್ಯಾಲಿಯಲ್ಲಿ ನಟ, ಕೃಷಿ ಸಚಿವ, ಕೌರವ ಬಿ.ಸಿ ಪಾಟೀಲ್, ಮಾಜಿ ಸಂಸದೆ ತೇಜಶ್ವಿನಿ ರಮೇಶ್ ಅವರು ಭಾಗಿಯಾಗಿದ್ದರು.