ಬೆಂಗಳೂರು: ಇತ್ತೀಚಿಗೆ ಪ್ರಮಾಣ ವಚನ ಸ್ವೀಕರಿಸಿದ 7 ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಹಾಗೂ ಸಂಪುಟದ 10 ಸಚಿವರ ಖಾತೆ ಬದಲಾವಣೆಯಾಗುತ್ತಿದೆ. ಸಚಿವರ ಖಾತೆ ಬದಲಾವಣೆ, ಸಚಿವರ ಖಾತೆ ಹಂಚಿಕೆಯ ಪಟ್ಟಿಯನ್ನು ಈಗಾಗಲೇ ಸರ್ಕಾರ ರಾಜಭವನಕ್ಕೆ ಕಳುಹಿಸಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಖಾತೆ ಹಂಚಿಕೆ ಫೈನಲ್ ಆಗಲಿದೆ. ಒಟ್ಟಾರೆ ಗಜಪ್ರಸವದಂತೆ ನಡೆದಿದ್ದ ಯಡಿಯೂರಪ್ಪನವರ ಸಂಪುಟ ಪುನಾರಚನೆಗೆ ಇಂದು ಅಧಿಕೃತ ತೆರೆ ಬೀಳಲಿದೆ.
ಸಚಿವರ ಸಂಭಾವ್ಯ ಖಾತೆ ಹಂಚಿಕೆ ಪಟ್ಟಿ:
ಬಿಎಸ್‌ವೈ- ಹಣಕಾಸು, ಇಂಧನ, ಬೆಂಗಳೂರು ನಗರಾಭಿವೃದ್ಧಿ. ಉಮೇಶ್ ಕತ್ತಿ-ಆಹಾರ & ನಾಗರಿಕ ಪೂರೈಕೆ. ಅಂಗಾರ- ಮೀನುಗಾರಿಕೆ & ಬಂದರು, ಒಳನಾಡು ಜಲಸಾರಿಗೆ. ಬಸವರಾಜ ಬೊಮ್ಮಾಯಿ- ಗೃಹ ಖಾತೆ, ಕಾನೂನು & ಸಂಸದೀಯ. ಜೆ.ಸಿ.ಮಾಧುಸ್ವಾಮಿ-ವೈದ್ಯಕೀಯ ಶಿಕ್ಷಣ, ಕನ್ನಡ ಸಂಸ್ಕೃತಿ. ಸಿ.ಸಿ.ಪಾಟೀಲ್- ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ. ಅರವಿಂದ ಲಿಂಬಾವಳಿ- ಅರಣ್ಯ. ಎಂಟಿಬಿ ನಾಗರಾಜ್- ಅಬಕಾರಿ. ಕೋಟ ಶ್ರೀನಿವಾಸ ಪೂಜಾರಿ- ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ. ಮುರುಗೇಶ್ ನಿರಾಣಿ- ಗಣಿ & ಭೂವಿಜ್ಞಾನ.
ಆನಂದ್ ಸಿಂಗ್ – ಪ್ರವಾಸೋದ್ಯಮ, ಪರಿಸರ ಇಲಾಖೆ. ಸಿ.ಪಿ.ಯೋಗೇಶ್ವರ್- ಸಣ್ಣ ನೀರಾವರಿ ಇಲಾಖೆ. ಪ್ರಭು ಚೌಹಾಣ್- ಪಶುಸಂಗೋಪನೆ ಇಲಾಖೆ. ಆರ್.ಶಂಕರ್- ಪೌರಾಡಳಿತ & ರೇಷ್ಮೆ ಇಲಾಖೆ. ಗೋಪಾಲಯ್ಯ- ತೋಟಗಾರಿಕೆ & ಸಕ್ಕರೆ. ನಾರಾಯಣ ಗೌಡ- ಯುವಜನ ಸೇವೆ & ಕ್ರೀಡೆ, ಹಜ್ & ವಕ್ಫ್ ಖಾತೆ ಹಂಚಿಕೆ ಮಾಡಿರುವ ಪಟ್ಟಿ ಇದೀಗ ರಾಜಭವನಕ್ಕೆ ರವಾನಿಸಲಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಖಾತೆ ಹಂಚಿಕೆ ಅಧಿಕೃತವಾಗಲಿದೆ.




