ಮತದಾರರ ಪತ್ರದ (ವೋಟರ್ ಐಡಿ) ಬಗ್ಗೆ ವಿಶೇಷ ಹೇಳಲು ಏನೂ ಇಲ್ಲ. ನಿಮಗೆ ಮತದಾನದ ಹಕ್ಕು ಇದೆಯೇ? ಅಥವಾ ಇಲ್ಲವೇ? ಎಂದು ನಿರ್ಧರಿಸುವುದಕ್ಕೆ ಇದೇ ಸಾಕ್ಷಿ. 18 ವರ್ಷಕ್ಕಿಂತ ಮೇಲ್ಪಟ್ಟವರು ಮತದಾರರ ಚೀಟಿ (ವೋಟರ್ ಐಡಿ) ಪಡೆಯಬಹುದು. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡಿನಂತೆ, ಮತದಾರರ ಕಾರ್ಡ್ ಕೂಡ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.
ಆದರೆ, ಮತದಾರರ ಕಾರ್ಡ್‌ನಲ್ಲಿನ ವಿವರಗಳು ಕೆಲವೊಮ್ಮೆ ತಪ್ಪಾಗಿರಬಹುದು. ನಿಮ್ಮ ಮತದಾರರ ಕಾರ್ಡ್‌ನಲ್ಲಿ ಹೆಸರು ಅಥವಾ ವಿಳಾಸದಂತಹ ವಿವರಗಳಲ್ಲಿ ತಪ್ಪುಗಳಿದ್ದರೆ ನೀವು ಅವುಗಳನ್ನು ಸುಲಭವಾಗಿ ಸರಿಪಡಿಸಬಹುದು. ಇದಕ್ಕಾಗಿ ಎಲ್ಲಿಯೂ ಹೋಗಬೇಕಾದ ಅಗತ್ಯವಿಲ್ಲ. ಈ ಕೆಲಸವನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು.
ಇದಕ್ಕಾಗಿ ನೀವು ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಹೋಗಬೇಕು. ನಿಮ್ಮ ಹೆಸರು ಮತ್ತು ವಿವರಗಳೊಂದಿಗೆ ನೀವು ನೋಂದಾಯಿಸಿಕೊಳ್ಳಬೇಕು. ನೀವು ಈಗಾಗಲೇ ನೋಂದಾಯಿಸಿದ್ದರೆ, ನೀವು ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಆಗಬೇಕು. ನೀವು ಈಗ ಎಡಗೈಯಲ್ಲಿ ‘ವೈಯಕ್ತಿಕ ವಿವರಗಳಲ್ಲಿ ತಿದ್ದುಪಡಿ’ (Correction in personal details) ಎಂಬ ಆಯ್ಕೆಕಾಣುತ್ತದೆ. ಇದು ಮೂರನೇ ಆಯ್ಕೆ ಎಂದು ಹೇಳಬಹುದು.
ಈಗ ನೀವು ನಿಮ್ಮ ರಾಜ್ಯ, ಜಿಲ್ಲೆ, ಕ್ಷೇತ್ರದಂತಹ ವಿವರಗಳನ್ನು ಆರಿಸಬೇಕಾಗುತ್ತದೆ. ಈಗ ನೀವು ನಿಮ್ಮ ವಿವರಗಳನ್ನು ಸರಿಪಡಿಸಬಹುದು. ಹೆಸರು, ವಿಳಾಸ, ಫೋಟೋ ಬದಲಾಯಿಸಬಹುದು. ಅದಕ್ಕೆ, ಪುರಾವೆ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗಿದೆ. ನಿಮಗೆ ಒಂದು ಉಲ್ಲೇಖ ಸಂಖ್ಯೆ (reference number) ಬರುತ್ತದೆ. ಇದರ ಸಹಾಯದಿಂದ ನಿಮ್ಮ ಸ್ಥಿತಿಯನ್ನು (ಸ್ಟೇಟಸ್) ನೀವು ತಿಳಿದುಕೊಳ್ಳಬಹುದು.