ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಇಂದಿನಿಂದ ದಿಂದ ಮೇ 4ರವರೆಗೆ ಕಠಿಣ ನಿಯಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಏ.21ರಿಂದ ಮೇ 4ರವರೆಗೆ ಕರ್ಫ್ಯೂ: ಏನಿರುತ್ತೆ, ಏನಿರಲ್ಲ?
ರಾತ್ರಿ 9ರಿಂದ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಹಾಗು ನೈಟ್ ಕರ್ಫ್ಯೂ ಜೊತೆ ವೀಕೆಂಡ್ ಕರ್ಫ್ಯೂ
ಅಗತ್ಯಸೇವೆ ಹೊರತುಪಡಿಸಿ ಎಲ್ಲವೂ ಬಂದ್
ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಹಾಗೂ ಇ-ಕಾಮರ್ಸ್ ಕಂಪನಿಗಳ ಡೆಲಿವರಿಗೆ ಮಾತ್ರವೇ ಅವಕಾಶ ಇರಲಿದೆ.
ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಕೆಲಸಕ್ಕೆ ಅನುಮತಿ
ಮದುವೆಗೆ 50 ಜನ, ಅಂತ್ಯಕ್ರಿಯೆಯಲ್ಲಿ 20 ಜನ, ಬಸ್ ನಲ್ಲಿ ಶೇ.50ರಷ್ಟು ಮಂದಿ ಮಾತ್ರ ಪ್ರಯಾಣಿಸಬೇಕು
ನೈಟ್ ಕರ್ಫ್ಯೂ ವೇಳೆ ಯಾರೂ ಓಡಾಡುವಂತಿಲ್ಲ
ಬೆಳಗ್ಗೆ 6ರಿಂದ 10ರವರೆಗೆ ದಿನಬಳಕೆ ವಸ್ತು ಮಾರಾಟಕ್ಕೆ ಅವಕಾಶ
ರೈಲ್ವೆ, ವಿಮಾನ ಪ್ರಯಾಣಿಕರು ಟಿಕೆಟ್ ತೋರಿಸಿ ಸಂಚರಿಸಬಹುದು
ತರಬೇತಿ, ಧಾರ್ಮಿಕ ಕೇಂದ್ರ & ಎಲ್ಲಾ ರೀತಿ ಸಮಾವೇಶಕ್ಕೆ ನಿರ್ಬಂಧ. ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಚಕರಿಗೆ ಮಾತ್ರ ಅವಕಾಶ
ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು, ಈಜುಕೊಳ, ಬಾರ್ & ರೆಸ್ಟೋರೆಂಟ್ ಗಳು ಬಂದ್ ಇರಲಿವೆ.
ಕಟಿಂಗ್ ಶಾಪ್, ಸಲೂನ್ ಹಾಗೂ ಬ್ಯೂಟಿ ಪಾರ್ಲರ್ ತೆರೆದಿರಲಿವೆ.