* ದೇಶದಲ್ಲಿ 50 ಹೊಸ ಏರ್‌ಪೋರ್ಟ್‌ಗಳ ನಿರ್ಮಾಣ
* 2.40 ಲಕ್ಷ ಕೋಟಿ ರೂಪಾಯಿ ರೈಲ್ವೆಗೆ ಮೀಸಲು
* ಸರಕು ಸಾಗಣೆಗೆ 100 ಹೊಸ ಸಾರಿಗೆ ಯೋಜನೆ (ಕಲ್ಲಿದ್ದಲು, ಸಿಮೆಂಟ್, ಸ್ಟೀಲ್, ರಸಗೊಬ್ಬರ ಸಾಗಣೆ)
* ದೇಶದ ಎಲ್ಲಾ ನಗರಗಳು ಮ್ಯಾನ್ ಹೋಲ್ ಮುಕ್ತ ಗುರಿ
* ಮುಂದಿನ 3 ವರ್ಷಗಳಲ್ಲಿ ಬುಡಕಟ್ಟು ವಿದ್ಯಾರ್ಥಿಗಳು ಓದುವ 740 ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಕ.
* ಬುಡಕಟ್ಟು ಜನರ ಆರೋಗ್ಯ, ಶಿಕ್ಷಣ ಅನುದಾನ ಬಿಡುಗಡೆ
ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ಮಾದರಿ ಶಾಲೆ:
ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಕೇಂದ್ರ ಬಜೆಟ್‌ನಲ್ಲಿ ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ. ಮುಂದಿನ 3 ವರ್ಷಗಳಲ್ಲಿ 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿರುವ 740 ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.