ಯುವಕನ ಜೀವ ರಕ್ಷಿಸಿದ ಆರ್‌ಪಿಎಫ್ ಮುಖ್ಯ ಪೇದೆ: ರೈಲಿನಲ್ಲಿ ತಪ್ಪಿತು ದುರಂತ

ದಾವಣಗೆರೆ: ( Constable saved young man) ಆರ್‌ಪಿಎಫ್ ಮುಖ್ಯ ಪೇದೆಯೊಬ್ಬ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಪ್ರಜ್ವಲ್ ಎಂಬ ಯುವಕನಿಗೆ ಜೀವ ರಕ್ಷಕರಾಗಿದ್ದು, ಸಾವಿನ ದವಡೆಯಲ್ಲಿದ್ದ ಯುವಕನಿಗೆ ಮರುಜೀವ ನೀಡಿದ್ದಾರೆ. ಹೌದು, ಇಂತದ್ದೊಂದು…

Constable saved young man

ದಾವಣಗೆರೆ: ( Constable saved young man) ಆರ್‌ಪಿಎಫ್ ಮುಖ್ಯ ಪೇದೆಯೊಬ್ಬ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಪ್ರಜ್ವಲ್ ಎಂಬ ಯುವಕನಿಗೆ ಜೀವ ರಕ್ಷಕರಾಗಿದ್ದು, ಸಾವಿನ ದವಡೆಯಲ್ಲಿದ್ದ ಯುವಕನಿಗೆ ಮರುಜೀವ ನೀಡಿದ್ದಾರೆ.

ಹೌದು, ಇಂತದ್ದೊಂದು ಘಟನೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ರೈಲಿಗೆ ಸಿಲುಇ ಯುವಕ ಪ್ರಾಣ ಕಳೆದುಕೊಳ್ಳುವ ಸಂದರ್ಭದಲ್ಲಿ ಮುಖ್ಯ ಪೇದೆ ಸತೀಶ್ ಬೆಂಕಿಕೆರೆ ಕಾಪಾಡಿದ್ದು, ಯುವನ ಪಾಲಿಗೆ ಜೀವ ರಕ್ಷಕರಾಗಿದ್ದಾರೆ. ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಪ್ರಜ್ವಲ್ ಎಂಬ ಯುವಕ ಉದ್ಯೋಗ ಅರಸಿ ಬ್ಯಾಡಗಿಗೆ ರೈಲಿನಲ್ಲಿ ಹೋಗಲು ನಿರ್ಧರಿಸಿದ್ದ. ಶನಿವಾರ ನಗರದಲ್ಲಿ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು, ರಾತ್ರಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ.

Read Also: ರಾಜ್ಯದಲ್ಲಿ ಭಾರಿ ಮಳೆಗೆ ಮೂವರು ಬಲಿ; 150 ಕಾರುಗಳು, 600 ಬೈಕ್‌ ಮುಳುಗಡೆ

Vijayaprabha Mobile App free

Constable saved young man

ಮೈಸೂರಿನಿಂದ ಸೋಲ್ಲಾಪುರಕ್ಕೆ ಹೋಗುವ ಗೋಲ್ ಗುಂಬಜ್ ರೈಲು ನಿಲ್ದಾಣದ ೧ನೇ ಪ್ಲಾಟ್ ಫಾರ್ಮ್‌ನಲ್ಲಿ ರೈಲು ಹತ್ತಿದ ಯುವಕ ಬ್ಯಾಡಗಿಗೆ ನಿಲುಗಡೆ ಇದೆಯೇ ಎಂದು ಅಲ್ಲನ ಪ್ರಯಾಣಕರೊಬ್ಬರನ್ನು ಕೇಳಿದ. ಆಗ ಪ್ರಯಾಣಿಕ ಆತ ಇಲ್ಲ ಎಂದು ಹೇಳಿದ್ದಾನೆ. ಅಷ್ಟರಲ್ಲಿ ರೈಲು ಹೊರಟಿದೆ. ಆಗ ರೈಲಿನಿಂದ ಜಿಗಿದಾಗ ಬೀಳುವ ಸಂದರ್ಭವಿತ್ತು. ಅಲ್ಲೇ ನಿಂತಿದ್ದ ಮುಖ್ಯ ಪೇದೆ ಸತೀಶ್ ತಕ್ಷಣ ಪ್ರಜ್ವಲ್‌ನನ್ನು ಎಳೆದು ಜೀವ ಕಾಪಾಡಿದ್ದಾರೆ.

Read Also: ಮಳೆ-ಗಾಳಿಗೆ ನೆಲಕಚ್ಚಿದ ಜೋಳ; ಕಣ್ಣೀರಿಟ್ಟ ರೈತರು

ಸದ್ಯ ಯುವಕನಿಗೆ ಅಂತಹ ಗಂಭೀರ ಗಾಯಗಳು ಆಗಿಲ್ಲ. ಪ್ರಜ್ವಲ್‌ನನ್ನು ಕಚೇರಿಗೆ ಕರೆದುಕೊಂಡು ಹೋಗಿ ನೀರು ಕುಡಿಸಿ ಸಂತೈಸಿ, ಬಳಿಕ ಬ್ಯಾಡಗಿಗೆ ನಿಲುಗಡೆಯಾಗುವ ರೈಲಿಗೆ ಹತ್ತಿಸಿ ಕಳುಹಿಸಿದ್ದಾರೆ. ಆದರೆ ಆಘಾತಕ್ಕೆ ಒಳಗಾಗಿದ್ದ ಪ್ರಜ್ವಲ್ ಹರಿಹರದಲ್ಲಿ ಇಳಿದು ಸ್ವಗ್ರಾಮ ದುಗ್ಗಾವತಿಗೆ ಮರಳಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

English Summary: Davangere: An RPF head Constable Saved the life of a young man who got hit by a moving train The incident took place on Saturday night at the city’s railway station Happened.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.