ದೂರು ಕೊಟ್ಟವನೇ ನನ್ನ ಗಂಡ: ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ

ಕಾಂಗ್ರೆಸ್ ಯುವ ನಾಯಕಿ ನವ್ಯಶ್ರಿ ರಾಮಚಂದ್ರರಾವ್ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಎಂಬವರು ನವ್ಯಶ್ರೀ ವಿರುದ್ಧ ಹನಿಟ್ರ್ಯಾಪ್, ಸುಳ್ಳು ಕೇಸ್, ಮಾನಸಿಕ…

Navyashree Ramachandra Rao vijayaprabha news

ಕಾಂಗ್ರೆಸ್ ಯುವ ನಾಯಕಿ ನವ್ಯಶ್ರಿ ರಾಮಚಂದ್ರರಾವ್ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಎಂಬವರು ನವ್ಯಶ್ರೀ ವಿರುದ್ಧ ಹನಿಟ್ರ್ಯಾಪ್, ಸುಳ್ಳು ಕೇಸ್, ಮಾನಸಿಕ ಹಿಂಸೆ, ಬ್ಲಾಕ್ ಮೇಲ್, ಜೀವ ಬೆದರಿಕೆ ಇದೆ ಎಂದು ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣ ಸಂಬಂಧ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರಿ ರಾಮಚಂದ್ರರಾವ್, ನಾನು 15 ದಿನ ಇಂಡಿಯಾದಲ್ಲೇ ಇರಲಿಲ್ಲ. ನಾನು ಬಂದಿದ್ದೇ ಇವತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಟೋ, ವಿಡಿಯೋಗಳು ವೈರಲ್ ಆಗಿರುವುದು ಗೊತ್ತಾಗಿದ್ದು, ಬೆಳಗಾವಿ ಪೊಲೀಸ್ ಕಮೀಷನರ್ ಭೇಟಿಯಾಗಿ ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು, ನನ್ನ ಮೇಲೆ ಎಫ.ಐ.ಆರ್ ಆಗಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಇಲ್ಲಿಯವರೆಗೂ ಯಾವುದೇ ಪೊಲೀಸರು ನನಗೆ ಪೋನ್ ಮಾಡಿಲ್ಲ. ಕಂಪ್ಲೇಂಟ್ ಕಾಪಿ‌ ಪಡೆದು ಮಾತಾಡುವೆ ಎಂದು ಯುವ ನಾಯಕಿ ನವ್ಯಶ್ರಿ ಹೇಳಿದ್ದಾರೆ. ಆದರೆ, ಎಲ್ಲರ ಪ್ರಶ್ನೆ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಯಾರು ಅಂತಾ. ರಾಜಕುಮಾರ ಟಾಕಳೆ ನನ್ನ ಗಂಡ. ಅವನಿಂದ ನನಗೆ ಏನು ಮೋಸ ಆಗಿದ್ದು, ನಾನು ಯಾವ ರೀತಿ ಮದುವೆ ಆಗಿರುವೆ ಎಲ್ಲವನ್ನ ಹೇಳ್ತಿನಿ ಎಂದು ಹೇಳಿದ್ದು, ನಾಳೆ ಈ ಬಗ್ಗೆ ಸುದ್ದಿಗೋಷ್ಠಿ‌ ನಡೆಸಿ ಎಲ್ಲವನ್ನ ನಾನು ತಿಳಿಸುವೆ ಎಂದು ಹೇಳಿ ಕಮೀಷನರ್ ಕಚೇರಿಗೆ ತೆರಳದೇ ಅಜ್ಞಾತ ಸ್ಥಳಕ್ಕೆ ನವ್ಯಶ್ರೀ ತೆರಳಿದ್ದಾರೆ

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.