ಗುರುಗಾವ್ : ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ (71) ಇಂದು ಮುಂಜಾನೆ 3.30ಕ್ಕೆ ಗುರಗಾಂವ್ ನ ಆಸ್ಪತ್ರೆಯಲ್ಲಿ ವಿಧವಶರಾಗಿದ್ದಾರೆ. ಕೊರೋನಾ ಸೋಂಕಿಗೆ ಒಳಗಾದ ಬಳಿಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.
ಅಹ್ಮದ್ ಪಟೇಲ್ ಅವರನ್ನು ಚಿಕಿತ್ಸೆಗೆಂದು ಮೆಡಂತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ ಅಹ್ಮದ್ ಪಟೇಲ್ ಅವರು ನಿಧನರಾದರು ಎಂದು ಅವರ ಪುತ್ರ ಫೈಸಲ್ ಪಟೇಲ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಫೈಜಲ್ ಪಟೇಲ್ ಅವರು ” ತುಂಬಾ ದುಃಖದಿಂದ ನಮ್ಮ ತಂದೆ ಶ್ರೀ ಅಹಮದ್ ಪಟೇಲ್ ಅವರು 25-11-2020 ರಂದು ಬೆಳಗ್ಗೆ 3:30 ರಂದು ಅಕಾಲಿಕ ನಿಧನ ಹೊಂದಿದ್ದಾರೆ ಎಂದು ಹೇಳಲು ವಿಷಾದಿಸುತ್ತೇನೆ.
ಒಂದು ತಿಂಗಳ ಹಿಂದಿಯೇ ಕರೋನ ಸೋಂಕು ತಗುಲಿದ್ದು, ಬಹು ಅಂಗಾಂಗಗಳಿಂದ ಸಹ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೋವಿಡ್ ನಿಯಮ ಪಾಲಿಸಬೇಕು ಎಂದು ಎಲ್ಲಾ ಹಿತೈಷಿಗಳಿಗೆ ಮನವಿ ಮಾಡಿದ್ದಾರೆ.
ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಹ್ಮದ್ ಪಟೇಲ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು, ಗಣ್ಯರು ಸೇರಿದಂತೆ ಅಪಾರ ಅಭಿಮಾನಿನಗಳು ಕಂಬನಿ ಮಿಡಿದ್ದಾರೆ.
@ahmedpatel pic.twitter.com/7bboZbQ2A6
— Faisal Patel (@mfaisalpatel) November 24, 2020