Coffee price : ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಕಾಫಿ(Coffee) ರಫ್ತು ಬರೋಬ್ಬರಿ ಶೇ. 29ರಷ್ಟು ಏರಿಕೆ ಕಂಡಿದೆ. ಭಾರತವು 2024ರ ಏಪ್ರಿಲ್‌ನಿಂದ ನವೆಂಬರ್ ತನಕ ರಫ್ತು ಮಾಡಿದ ಕಾಫಿಯ ಮೌಲ್ಯ 1,146.9 ಮಿಲಿಯನ್ ಡಾಲರ್ (ಸುಮಾರು 9,800 ಕೋಟಿ ರೂ.) ಆಗಿದೆ.
ಹೌದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 803.8 ಮಿಲಿಯನ್ ಡಾಲರ್ (6,900 ಕೋಟಿ ರೂ.) ಮೌಲ್ಯದ ಕಾಫಿಯನ್ನು ರಫ್ತು ಮಾಡಲಾಗಿತ್ತು ಎಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ) ತಿಳಿಸಿದೆ.
ಇದನ್ನೂ ಓದಿ: Airavata scheme | ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸುವ ಐರಾವತ ಯೋಜನೆ; ವಾಹನ ಖರೀದಿಸಲು 5 ಲಕ್ಷ ಸಹಾಯಧನ
Coffee price : 3 ವರ್ಷದ ನಂತರ ಕಾಫಿಗೆ ಭರ್ಜರಿ ಬೆಲೆ!
ಕಳೆದ 25 ವರ್ಷದಿಂದ ನಷ್ಟದಲ್ಲಿದ್ದ ಕಾಫಿ ಉದ್ಯಮಕ್ಕೆ ಇತ್ತೀಚಿನ 3 ವರ್ಷದ ಅವಧಿಯಲ್ಲಿ ಶುಕ್ರದೆಸೆ ಖುಲಾಯಿಸಿದೆ. ಕಾಫಿ ಧಾರಣೆ ಹಿಂದೆಂದಿಗಿಂತಲೂ ಈಗ ಏರಿಕೆ ಕಂಡಿರುವುದರಿಂದ ಮೊದಲ ಸುತ್ತಿನಲ್ಲಿ ಕೊಯ್ಲು ಮಾಡಿದ ಪಲ್ಪಿಂಗ್ ಆದ ಕಾಫಿಯನ್ನು ಬೆಳೆಗಾರರು ಮಾರುಕಟ್ಟೆಗೆ ಬಿಡುತ್ತಿದ್ದಾರೆ.
ಅರೆಬಿಕಾ ಪಾರ್ಚ್ಮೆಂಟ್ 50 ಕೆಜಿ ಚೀಲವೊಂದಕ್ಕೆ 21,250 ರೂ., ಅರೆಬಿಕಾ ಚೆರಿ 12,040 ರೂ., ರೊಬಸ್ಟಾ ಪಾರ್ಚ್ಮೆಂಟ್ 19,500 ರೂ. ಹಾಗೂ ರೊಬಸ್ಟಾ ಚೆರಿಗೆ 11,880 ರೂ. ಧಾರಣೆ ಇದೆ.
ಇದನ್ನೂ ಓದಿ: Saving money | ಪ್ರತಿ ತಿಂಗಳು ಹಣ ಉಳಿತಾಯ ಮಾಡುವುದು ಹೇಗೆ? ಇಲ್ಲಿದೆ ಉತ್ತಮ ಸಲಹೆಗಳು




