ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ಸಂಪುಟ ಸಚಿವರ ಖಾತೆಗಳನ್ನು ಮತ್ತೆ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಹೌದು, ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ & ಸಕ್ಕರೆ, ಜೆ.ಸಿ.ಮಾಧುಸ್ವಾಮಿ-ವೈದ್ಯಕೀಯ ಶಿಕ್ಷಣ, ಹಜ್ & ವಕ್ಫ್ ಮಂಡಳಿ, ಕೆ.ಗೋಪಾಲಯ್ಯ-ಅಬಕಾರಿ, ಆರ್.ಶಂಕರ್-ತೋಟಗಾರಿಕೆ & ರೇಷ್ಮೆ, ಕೆ.ಸಿ.ನಾರಾಯಣಗೌಡ – ಯುವಜನ ಸೇವೆ & ಕ್ರೀಡೆ ಹಾಗೂ ಯೋಜನೆ, ಸಾಂಖ್ಯಿಕ & ಅಂಕಿ-ಅಂಶ ಖಾತೆ, ಅರವಿಂದ ಲಿಂಬಾವಳಿಗೆ ಅರಣ್ಯ, ಕನ್ನಡ & ಸಂಸ್ಕೃತಿ ಇಲಾಖೆ ಜವಾಬ್ದಾರಿ ವಹಿಸಿದ್ದಾರೆ.
ಎಂಟಿಬಿ ನಾಗರಾಜ್, ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಲವು ನಾಯಕರು ಖಾತೆ ಹಂಚಿಕೆಯಲ್ಲಿ ಅಸಮಾಧಾನ ಸ್ಪೋಟಗೊಂಡ ಹಿನ್ನಲೆಯಲ್ಲಿ, ಕೆಲವು ನಾಯಕರ ಖಾತೆಗಳನ್ನು ಮತ್ತೆ ಬದಲಾವಣೆ ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿ : ಸಪ್ತ ಸಚಿವರ ಖಾತೆ ಹಂಚಿಕೆಗೆ ಕ್ಷಣಗಣನೆ; ಇಲ್ಲಿದೆ ಸಂಭಾವ್ಯ ಖಾತೆ ಹಂಚಿಕೆ ಪಟ್ಟಿ!