CM Siddaramaiah । ರಾಜ್ಯದಲ್ಲಿ ಅತ್ಯಧಿಕ ಅವಧಿ ಸೇವೆ ಸಲ್ಲಿಸಿದ ಸಿಎಂ ಎಂಬ ದಾಖಲೆ ಬರೆಯುವತ್ತ ಸಿಎಂ ಸಿದ್ದರಾಮಯ್ಯ ದಾಪುಗಾಲಿಡುತ್ತಿದ್ದಾರೆ.
ಹೌದು, ಸಿಎಂ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮಾಜಿ ಸಿಎಂ ದೇವರಾಜ ಅರಸು ಅವರ 7 ವರ್ಷ 7 ತಿಂಗಳು 20 ದಿನಗಳ ದಾಖಲೆ ಮುರಿಯುವ ಹಾದಿಯಲ್ಲಿದ್ದಾರೆ. ಜನವರಿ 5ರ ವರೆಗೆ ಸಿಎಂ ಆಗಿ ಮುಂದುವರಿದಿದ್ದೇ ಆದರೆ, ಮಾಜಿ ಸಿಎಂ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಸರಿಗಟ್ಟಲಿದ್ದಾರೆ.
ಆದರೆ, ಇದು ಸಾಕಾರಗೊಳ್ಳಬೇಕಾದರೆ, ಜ. 5 ವರೆಗೂ ಸಿಎಂ ಹುದ್ದೆಯಲ್ಲಿ ಮುಂದುವರಿಯಬೇಕು. ಅಧಿಕಾರ ಹಂಚಿಕೆ ಕುರಿತ ಊಹಾಪೋಹಗಳು ನಿಜವಾಗದಿದ್ದರೆ, ಸಿದ್ದರಾಮಯ್ಯ ಅವರು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅತ್ಯಧಿಕ ಅವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ದೇವರಾಜ ಅರಸು ಅವರು 1972ರಿಂದ 1980ರವರೆಗೆ ಎರಡು ಅವಧಿಗಳಲ್ಲಿ ಮುಖ್ಯಮಂತ್ರಿಯಾಗಿದ್ದರು.




