BPL card : ಯಾವುದೇ ಅರ್ಹರಿಗೆ ರೇಷನ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಮಾಧ್ಯಮಗಳ ಮೇಲೆಯೇ ಆರೋಪ ಮಾಡಿ CM ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಹೌದು, ರೇಷನ್ ಕಾರ್ಡ್ ರದ್ದು ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ರೇಷನ್ ಕಾರ್ಡ್ ವಿಚಾರದಲ್ಲಿ ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ. ಅನರ್ಹರಿಗೆ ಮಾತ್ರ ನಾವು ಕಾರ್ಡ್ ರದ್ದು ಮಾಡೋದು. ಅರ್ಹರಿಗೆ ಯಾರಿಗೂ ತಪ್ಪಿಸುವುದಿಲ್ಲ. ಪಡಿತರ ಚೀಟಿಗಳನ್ನು ಪರಿಷ್ಕರಣೆ ಮಾಡುತ್ತಿದ್ದೇವೆ. ಯಾರು ಎಪಿಎಲ್ ಕಾರ್ಡ್‌ಗಳ ಕೆವೈಸಿ ಮಾಡಿಲ್ಲವೋ ಅವುಗಳೆಲ್ಲವು ಸಹ ರದ್ದಾಗಲಿವೆ ಎಂದು ಹೇಳಿದರು
ಇದನ್ನೂ ಓದಿ: Ration Card EKYC | ರೇಷನ್ ಕಾರ್ಡ್ ರದ್ದಾಗುತ್ತೆ; ಡಿಸೆಂಬರ್ 1ರೊಳಗೆ ಇ-ಕೆವೈಸಿ ಮಾಡಿಸಿ
ಅಷ್ಟೇ ಅಲ್ಲ, ಒಟ್ಟಾರೆ ಬಡವರಿಗೆ ಕೊಡಬೇಕು ಎಂದು ನನ್ನ ಹತ್ರ ಹೇಳುತ್ತೀರಿ. ಆದರೆ ಬರೆಯುವಾಗ, ತೋರಿಸುವಾಗ ಬಿಜೆಪಿ ಅವರು ಹೇಳಿದ ಹಾಗೆ ಬರೆಯುತ್ತೀರಾ? ಎಂದು ಪ್ರಶ್ನೆ ಮಾಡಿದ್ದು, ಮಾಧ್ಯಮದವರೇ ಗೊಂದಲ ಸೃಷ್ಟಿಸುತ್ತಿದ್ದೀರಿ ಎಂದು ಸಿಎಂ ಗರಂ ಆದರು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment