ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದ 435 ಎಕರೆ ಜಮೀನಿನಲ್ಲಿ ಸ್ಥಾಪನೆಯಾಗುತ್ತಿರುವ 5000 ಕೋಟಿ ವೆಚ್ಚದ ಏಷ್ಯಾದ ಅತೀ ದೊಡ್ಡ ಆಟಿಕೆ (ಟಾಯ್ಸ್) ಕ್ಲಸ್ಟರ್ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪನವರು ಇಂದು ಬೆಳಗ್ಗೆ 10.30ಕ್ಕೆ ಭೂಮಿಪೂಜೆ ನೆರೆವೇರಿಸಲಿದ್ದಾರೆ.
ಇನ್ನು ಕ್ಲಸ್ಟರ್ ನಿರ್ಮಾಣಕ್ಕೆ ಕೊಪ್ಪಳದ ಸುತ್ತಮುತ್ತ ಏಕಸ್ ಇಂಡಿಯಾ ಕಂಪನಿ ಜಮೀನನನ್ನು ಖರೀದಿಸಿದ್ದು ಇಲ್ಲಿ ಅತ್ಯಾಧುನಿಕ ಆಟಿಕೆ ಸಾಮಗ್ರಿ ಸೇರಿ ಆಕರ್ಷಕ ಗೊಂಬೆಗಳನ್ನು ತಯಾರಿಸುತ್ತದೆ. ಇದರಿಂದ 40,000 ಜನರಿಗೆ ಉದ್ಯೋಗ ನೀಡುವ & ವಾರ್ಷಿಕ 2,300 ಕೋಟಿ ವಹಿವಾಟಿನ ಗುರಿ ಹೊಂದಲಾಗಿದ್ದು, 2023 ಕ್ಕೆ ಕ್ಲಸ್ಟರ್ ಘಟಕ ಕಾರ್ಯಾರಂಭವಾಗುವ ಸಾಧ್ಯತೆಯಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ್ ಯೋಜನೆಗೆ ಪೂರಕವಾಗಿ, ಏಷ್ಯಾದಲ್ಲೇ ಅತಿದೊಡ್ಡ ಅತೀ ಪ್ರಮಾಣದಲ್ಲಿ ಈ ಕ್ಲಸ್ಟರ್ ನಿರ್ಮಾವಾಗುತ್ತಿದ್ದು, ಇದಕ್ಕೆ ಕೌಶಲ ತರಬೇತಿ ನೀಡಲು ತಳಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದ್ದಾರೆ.