ನಮಗೂ, ಕಾಂಗ್ರೆಸ್ ಗೂ ಮುಗಿದ ಅಧ್ಯಾಯವೆಂದ ಸಿ.ಎಂ.ಇಬ್ರಾಹಿಂ; ರಾಜೀನಾಮೆ ಘೋಷಣೆ

ಬೆಂಗಳೂರು : ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೊಂದಿಗೆ ಮಾತನಾಡಿ ಶೀಘ್ರ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಿ.ಎಂ.ಇಬ್ರಾಹಿಂ ಘೋಷಿಸಿದ್ದಾರೆ. ನನಗೆ ಸ್ಥಾನ ತಪ್ಪಿದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉತ್ತರಿಸಬೇಕು. ನನಗೂ,…

ಬೆಂಗಳೂರು : ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೊಂದಿಗೆ ಮಾತನಾಡಿ ಶೀಘ್ರ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಿ.ಎಂ.ಇಬ್ರಾಹಿಂ ಘೋಷಿಸಿದ್ದಾರೆ.

ನನಗೆ ಸ್ಥಾನ ತಪ್ಪಿದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉತ್ತರಿಸಬೇಕು. ನನಗೂ, ಡಿ.ಕೆ.ಶಿವಕುಮಾರ್ ಗೂ ಹೊಂದಾಣಿಕೆ ಆಗಲ್ಲ. ಆದರೆ ಸಿದ್ದರಾಮಯ್ಯ ಜೊತೆ ಚೆನ್ನಾಗಿದ್ದೆ. ದೆಹಲಿಯಿಂದ ನನಗೆ ಕರೆಗಳು ಬರುತ್ತಿದ್ದು, ಎಲ್ಲವನ್ನೂ ಇಟ್ಟುಕೊಂಡಿದ್ದೇನೆ. ಉತ್ತರ ಪ್ರದೇಶ ಪ್ರಚಾರಕ್ಕೆ ಬರುವಂತೆ ಆಹ್ವಾನಿಸುತ್ತಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ l.

ನಮಗೂ, ಕಾಂಗ್ರೆಸ್ ಗೂ ಮುಗಿದ ಅಧ್ಯಾಯ:

Vijayaprabha Mobile App free

ಇನ್ನು,ನಮಗೂ, ಕಾಂಗ್ರೆಸ್ ಗೂ ಮುಗಿದ ಅಧ್ಯಾಯ ಎಂದು ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದ್ದು, ಸಿದ್ದರಾಮಯ್ಯಗಾಗಿ ನಾವು ಹೆಚ್.ಡಿ.ದೇವೇಗೌಡರನ್ನು & ಜೈಲಿನಲ್ಲಿದ್ದುಕೊಂಡೇ ಕಟ್ಟಿದ್ದ ಜೆಡಿಎಸ್ ಪಕ್ಷವನ್ನು ಬಿಟ್ಟಿದ್ದೆವು.

ಈಗಲೇ ಎಲ್ಲವನ್ನೂ ಹೇಳಲ್ಲ. ಚಾಮುಂಡೇಶ್ವರಿಯಲ್ಲಿ ಸೋಲುತ್ತಾರೆ ಎಂದು ತಿಳಿದು, ಬಾದಾಮಿ ನಾಯಕರನ್ನು ಒಪ್ಪಿಸಿ ನಾಮಪತ್ರ ಹಾಕಿಸಿ ಸಿದ್ದರಾಮಯ್ಯಗೆ ಹೊಸ ರಾಜಕೀಯ ಜೀವನ ಕೊಟ್ಟಿದ್ದೆ. ಆದರೆ ಅವರು ನನಗೆ ಒಳ್ಳೆಯ ಉಡುಗೊರೆ ನೀಡಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ಬೇಸರ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.