ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪ್ರಶ್ನಾತೀತ ನಾಯಕರಂತೆ ಬೆಳೆದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಬಗೆಗೆ ಕಳೆದ ಹಲವು ತಿಂಗಳಿAದ ಅವರ ಪಕ್ಷದಲ್ಲೇ ಹೇಳಿಕೆಗಳು ಕೇಳಿ ಬರುತ್ತಿವೆ. ಈ ಎಲ್ಲಾ ವಿದ್ಯಾಮಾನಗಳ ಹಿಂದೆ ಸ್ವತಃ ಬಿಜೆಪಿ ಹೈಕಾಂಡ್ ನ ಕೃಪಕಟಾಕ್ಷ ಇದೆಯಾ ? ಎಂಬ ಅನುಮಾನುಗಳು ಮೂಡಿವೆ.
ತಳಮಟ್ಟದಿಂದ ಬಿಜೆಪಿ ಪಕ್ಷ ಕಟ್ಟಿ ಬೆಳಡಸಿದ ಬಿ.ಎಸ್.ಯಡಿಯೂರಪ್ಪ ಅವರ ಮಹಾನ್ ನಾಯಕರಂತೆ ಬೆಳೆದಿದ್ದಾರೆ. ಆದರೆ ಈ ಬಾರಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಈವರಗೆ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಲಾಗುತ್ತಿದ್ದರೂ ಸ್ವತಃ ಅವರದ್ದೇ ಪಕ್ಷದ ಶಾಸಕರು ಹಾಗೂ ಮುಖಂಡರು ಬಹಿರಂಗವಾಗಿಯೇ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಇAದು ಸತ್ವಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ “ಹೈಕಮಾಂಡ್ ಬಯಸಿದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿಕೆ ನೀಡಿದ್ದು, ಈವರೆಗೆ ಬಿಜೆಪಿ ಹೈಕಮಾಂಡ್ ನಾಯಕತ್ವ ಬದಲಾವಣೆ ಕುರಿತು ಸ್ಪಷ್ಟ ಸಂದೇಶ ನೀಡಿಲ್ಲ. ಅಂದರೆ ಸ್ವತಃ ಹೈಕಮಾಂಡ್ ಕೂಡ ಬಿ.ಎಸ್.ಯಡಿvಯೂರಪ್ಪ ರಾಜೀನಾಮೆ ನೀಡುವುದನ್ನು ಬಯಸಿದೆಯಾ ? ಎಂಬ ಅನುಮಾನುಗಳು ಶುರುವಾಗಿವೆ.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಸಚಿವ ಸಿ.ಪಿ.ಯೋಗೀಶ್ವರ್ ಸೇರಿ ಬಹಿರಂಗವಾಗಿ ಹೇಳಿಕೆ ನೀಡುತ್ತಿವುದಕ್ಕೂ ಹಾಗೂ ಶಿಸ್ತಿನ ಪಕ್ಷ ಎನಿಸಿಕೊಂಡಿರುವ ಬಿಜೆಪಿ ಹೈಕಮಾಂಡ್ ಮೌನ ವಹಿಸಿರುವುದರ ಹಿಂದಿನ ಉದ್ದೇಶ ಒಂದೇನಾ ? ಎಂಬ ಚರ್ಚೆಗಳು ಶುರುವಾಗಿವೆ.




