ಗಾಜನೂರು: ಗಾಜನೂರು ಬಳಿ ತುಂಗಾ ಎಡದಂಡೆ ನಾಲೆಯ ಪಕ್ಕದ ರಸ್ತೆಯಲ್ಲಿ ತೆರಳುವ ವೇಳೆ ಕಾರಿಗೆ ಹಾವು ಅಡ್ಡ ಬಂದಿದ್ದು, ಕೂಡಲೇ ಹಾವಿನ ಮೇಲೆ ಕಾರು ಹರಿಯುವುದನ್ನ ತಡೆಯಲು ಏಕಾಏಕಿ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿದೆ.
ಕಾರಿನೊಳಗೆ ನೀರು ತುಂಬಿದ್ದರಿಂದ ಪತ್ನಿ ಸುಷ್ಮಾ ಸ್ಥಳದಲ್ಲೇ ಮೃತಪಟ್ಟಿದ್ದು, ಬದುಕುಳಿದ ಪತಿ ಚೇತನ್ ಕುಮಾರ್ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಕೂಗುವ ಧ್ವನಿ ಕೇಳಿದರೂ ಸಹಾಯಕ್ಕೆ ಭಯದಿಂದ ಸ್ಥಳೀಯರು ಯಾರು ಮನೆಯಿಂದ ಆಚೆ ಬಂದಿಲ್ಲ. ಇನ್ನು, ಕೂಗಿದ ಶಬ್ಧದ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಅಲ್ಲಿನ ಸ್ಥಳೀಯರು ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ ನಾಲೆಯಲ್ಲಿ ಕಾರು ಬಿದ್ದಿರುವುದು ಗೊತ್ತಾಗಿದ್ದು, ಕೂಡಲೇ ಪೊಲೀಸರು ಮತ್ತು ಸ್ಥಳೀಯರಿಂದ ಚೇತನ್ ಅವರನ್ನ ಮೇಲಕ್ಕೆ ಎತ್ತಿ ರಕ್ಷಿಸಿದ್ದು, ಈ ಪ್ರಕರಣ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.