ಚಂಡೀಗಡ : ಹೆಂಡತಿಯನ್ನು ಕಾರಿನಲ್ಲಿ ಬಿಟ್ಟು ಹೋದ ಗಂಡನಿಗೆ ಕಳ್ಳರು ಶಾಕ್ ನೀಡಿದ್ದು, ಕಾರಿನ ಜೊತೆಗೆ ಹೆಂಡತಿಯನ್ನು ಕರೆದೊಯ್ದಿರುವ ಘಟನೆ ಗುರುವಾರ ಪಂಜಾಬ್‌ನ ಡೇರಾ ಬಸ್ಸಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಡೇರಾ ಬಸ್ಸಿಯ ರಾಜೀವ್ ಚಂದ್ ಮತ್ತು ರಿತು ಗುರುವಾರ ಮಧ್ಯಾಹ್ನ ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಶಾಲೆಗೆ ಬಂದಿದ್ದರು. ಕಾರ್ ಲಾಕ್ ಮತ್ತು ಕೀ ಹಾಗು ಹೆಂಡತಿ ರಿತು ಅವರನ್ನು ಕಾರಿನೊಳಗೆ ಬಿಟ್ಟು ರಾಜೀವ್ ಶಾಲೆಗೆ ಹೊಳಗೆ ಹೋಗಿದ್ದಾನೆ. ಇದಾದ ಸ್ವಲ್ಪ ಸಮಯದ ನಂತರ ಇಬ್ಬರು ವ್ಯಕ್ತಿಗಳು ಕಾರಿಗೆ ಪ್ರವೇಶಿಸಿದ್ದಾರೆ.
ಒಬ್ಬ ಡ್ರೈವಿಂಗ್ ಸೀಟಿನಲ್ಲಿ ಕುಳಿತು, ಇನ್ನೊಬ್ಬ ರಾಜೀವ್ ಅವರ ಹೆಂಡತಿ ರಿತು ಬಾಯಿಯನ್ನು ಬಟ್ಟೆಯಿಂದ ಮುಚ್ಚಿ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಸುಮಾರು ಐದು ಕಿಲೋಮೀಟರ್ ಹೋದ ನಂತರ,ಹೆಂಡತಿ ರಿತು ಅವರನ್ನುಕೆಳಕ್ಕೆ ತಳ್ಳಿ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಶಾಲೆಯಲ್ಲಿ ಕೆಲಸ ಮುಗಿಸಿ ಹೊರಗೆ ಬಂದ ರಾಜೀವ್, ಅಲ್ಲಿ ಕಾರು ಕಾಣಿಸದಿದ್ದಾಗ ಆತಂಕಗೊಂಡು ತನ್ನ ಹೆಂಡತಿಗೆ ಫೋನ್ ಮಾಡಿದ್ದಾನೆ. ಹೆಂಡತಿ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ, ರಾಜೀವ್ ಪೊಲೀಸರಿಗೆ ದೂರು ನೀಡಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಲಾಗಿದೆ. ಆದರೆ, ಕೆಲವು ಗಂಟೆಗಳ ನಂತರ ಹೆಂಡತಿ ಮನೆಗೆ ತಲುಪುತ್ತಿದ್ದಂತೆ ರಾಜೀವ್ ನಿಟ್ಟುಸಿರು ಬಿಟ್ಟಿದ್ದಾನೆ.