ಬೆಂಗಳೂರು: ಕರೋನ ಹಿನ್ನಲೆ ಲಾಕ್ ಡೌನ್ ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಬಸ್ ಗಳು ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದು, ಒಂದು ವೇಳೆ ಸರ್ಕಾರ ಈ ಮನವಿಗೆ ಸ್ಪಂದಿಸಿದರೆ, ಖಾಸಗಿ ಬಸ್ ಟಿಕೆಟ್ ದರ ಶೇ.20ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಕರೋನ ಹಿನ್ನಲೆ ಲಾಕ್ ಡೌನ್ ಗೂ ಮುನ್ನವೇ ಸಾರಿಗೆ ನಿಗಮಗಳು ನಷ್ಟದಲ್ಲಿದ್ದವು. ಡಿಸೇಲ್ ಬೆಲೆ ಕೂಡ ಜಾಸ್ತಿಯಾಗಿ ಮತ್ತಷ್ಟು ನಷ್ಟ ಅನುಭವಿಸಿದ್ದು, ಹೀಗಾಗಿ, ಸಾರಿಗೆ ಬಸ್ ಟಿಕೆಟ್ ಪ್ರಯಾಣ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಖಾಸಗಿ ಬಸ್ ಗಳು ಮನವಿ ಸಲ್ಲಿಕೆ ಮಾಡಿವೆ.
ಇನ್ನು ಒಂದು ವೇಳೆ ಸರ್ಕಾರ ಖಾಸಗಿ ಬಸ್ ಗಳ ಮನವಿಗೆ ಸ್ಪಂದಿಸಿದರೆ ಜನತೆಗೆ ಬಸ್ ಟಿಕೆಟ್ ಹೆಚ್ಚಳದ ಬಿಸಿ ತಟ್ಟಲಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.