ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂಬಂಧ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಸದಸ್ಯೆಯನ್ನು ಕೈ ಹಿಡಿದು ಎಳೆದಾಡಿದ್ದಾರೆ. ಅಲ್ಲದೆ, ಈ ವೇಳೆ ಕೆಲವರು ಮಹಿಳೆಯನ್ನು ಹೊತ್ತೊಯ್ದಿರುವ ಅಮಾನವೀಯ ಘಟನೆ ಕೂಡಾ ನಡೆದಿದ್ದು, ರಾಜ್ಯವನ್ನೇ ತಲೆತಗ್ಗಿಸುವಂತೆ ಮಾಡಿದೆ. ‘ತನಗೆ ಶಾಸಕರು ಮತ್ತು ಅವರ ಬೆಂಬಲಿಗರು ದೈಹಿಕವಾಗಿ ಹಿಂಸಿಸಿದ್ದಾರೆ. ಉಸಿರುಗಟ್ಟಿದರೂ ಬಿಡಲಿಲ್ಲ’ ಅಂತ ಮಹಿಳೆ ಆರೋಪಿಸಿದ್ದಾರೆ.
ಅದು ಬಿಜೆಪಿ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ: ಡಿಕೆ ಶಿವಕುಮಾರ್
ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂಬಂಧ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಸದಸ್ಯೆಯ ಮೇಲೆ ನಡೆಸಿದ ದೌರ್ಜನ್ಯವನ್ನು ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದು, ‘ಅದು ಬಿಜೆಪಿ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ಹರಿಹಾಯ್ದಿದ್ದಾರೆ. ‘ನಾವು ಯಾರಿಗೆ ಏನು ಬೇಕಾದರೂ ಮಾಡಬಹುದು ಎನ್ನುವ ಪ್ರವೃತ್ತಿ ಅವರದು. ಬಿಜೆಪಿಯ ಯಾವ ಶಾಸಕರೂ, ಜನಪ್ರತಿನಿಧಿಗಳೂ ಯಾರ ನಿಯಂತ್ರಣದಲ್ಲಿಯೂ ಇಲ್ಲ’ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಬಾಗಲಕೋಟೆಯಲ್ಲಿ ಪುರಸಭಾ ಸದಸ್ಯೆಯರ ಮೇಲಿನ ದೌರ್ಜನ್ಯ, ಅವರನ್ನು ಬಿಜೆಪಿ ಶಾಸಕ @siddusavadi_bjp ಎಳೆದಾಡಿರುವುದು @BJP4Karnataka ಪಕ್ಷದ ಸಂಸ್ಕೃತಿಯನ್ನ ತೋರಿಸುತ್ತದೆ.
ನಾವು ಯಾರಿಗೆ ಏನು ಬೇಕಾದರೂ ಮಾಡಬಹುದು ಎನ್ನುವ ಪ್ರವೃತ್ತಿ ಅವರದು.
ಬಿಜೆಪಿಯ ಯಾವ ಶಾಸಕರೂ, ಜನಪ್ರತಿನಿಧಿಗಳೂ ಯಾರ ನಿಯಂತ್ರಣದಲ್ಲಿಯೂ ಇಲ್ಲ.
– @DKShivakumar pic.twitter.com/twHl0C7DSQ— Karnataka Congress (@INCKarnataka) November 11, 2020