ಬೀದರ್ : ಬಿಜೆಪಿ ಅವರು ಕಲ್ಯಾಣ ಕರ್ನಾಟಕ ಹೆಸರು ಬದಲಾಯಿಸಿದ್ರು ಆದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾತ್ರ ಮಾಡಲಿಲ್ಲ ಎಂದು ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.
ಹೆಸರು ಬದಲಾಯಿಸಿದ ಕೂಡಲೇ ಜಿಂದಾಬಾದ್ ಅಂದ್ರೆ ಸಾಕ? ಬಿ ಎಸ್ ವೈ ಜಿಂದಾಬಾದ್ ಅಂದ್ರೆ ಸಾಕ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹಣವೇ ಕೊಡ್ತಿಲ್ಲ. ಅನುದಾನವೇ ಕೊಡದಿದ್ರೆ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತೆ.
ಕರೋನದಿಂದ ಹಣವಿಲ್ಲ ವೆಂದು ಬಿ ಎಸ್ ವೈ ಹೇಳುತ್ತಾರೆ. ಕರೋನ ಖರ್ಚು ಹರೆತುಪಡಿಸಿ ಉಳಿದ ಹಣ ಎಲ್ಲಿ? ಇನ್ನುಳಿದ ಹಣ ಎಲ್ಲಿಗೆ ಹೋಯಿತು? ಎಂದು ಬಸವಕಲ್ಯಾಣದಲ್ಲಿ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಶ್ನಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರು ಆರ್.ಎಸ್.ಎಸ್ ನ ಮುಖವಾದವೇ ಬಿಜೆಪಿ ಎಂದು ಹೇಳಿದ್ದು, ಬಿಜೆಪಿಯವರು ಬಸವಣ್ಣನವರ ಫೋಟೋಗೆ ಪೂಜೆ ಮಾಡ್ತಾರೆ. ಆದ್ರೆ ಬಸವಣ್ಣನವರ ಸಿದ್ದಂತವನ್ನು ಯಾರು ಪಾಲಿಸುತ್ತಿಲ್ಲ ಎಂದು ಬೀದರ್ ಜಿಲ್ಲೆ ಬಸವಕಲ್ಯಾಣದದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರು; ಮಗ ಆರ್ ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ: ಸಿದ್ದರಾಮಯ್ಯ ಹೇಳಿಕೆ!