ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷವು ಎಎಪಿ ವಿರುದ್ಧ ಜಯಗಳಿಸಿದ ನಂತರ, 26 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಸರ್ಕಾರದ ಮೊದಲ ಬಜೆಟ್ ಇದಾಗಿದೆ.
ದೆಹಲಿಯ ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರ್ಕಾರ ಇಂದು ವಿಧಾನಸಭೆಯಲ್ಲಿ ತನ್ನ ಚೊಚ್ಚಲ ಬಜೆಟ್ ಮಂಡಿಸಿತು ಮತ್ತು ಸಿಎಂ ಶ್ರೀ ಶಾಲೆಗಳು, ಭಾಷಾ ಪ್ರಯೋಗಾಲಯಗಳು, ಆಧುನಿಕ ಕಂಪ್ಯೂಟರ್ ಪ್ರಯೋಗಾಲಯಗಳು ಮತ್ತು ನವೋದ್ಯಮ ಬೆಂಬಲ ಕೇಂದ್ರಗಳು ಸೇರಿದಂತೆ ಹಲವಾರು ಉಪಕ್ರಮಗಳನ್ನು ಘೋಷಿಸಿದೆ.
ಇದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಅವರ ಬಿಜೆಪಿ ಸರ್ಕಾರದ ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಜೆಟ್ ಆಗಿದೆ.
2025-26ನೇ ಹಣಕಾಸು ವರ್ಷದ ಒಟ್ಟು ಬಜೆಟ್ ವೆಚ್ಚವು ಹಿಂದಿನ ವರ್ಷಕ್ಕಿಂತ ಶೇ. 31.5 ರಷ್ಟು ಹೆಚ್ಚಾಗಿದೆ.
- ದೆಹಲಿ ಸರ್ಕಾರದ ಬಜೆಟ್‌ನಲ್ಲಿ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ 2,144 ಕೋಟಿ ರೂ. ಹಂಚಿಕೆ
- ‘ಮಹಿಳಾ ಸಮೃದ್ಧಿ ಯೋಜನೆ’ಗೆ ₹5,100 ಕೋಟಿ ಹಂಚಿಕೆ ಮಾಡಲಾಗಿದ್ದು, ಪ್ರತಿ ಅರ್ಹ ಮಹಿಳೆಗೆ ತಿಂಗಳಿಗೆ ₹2,500 ಪಾವತಿ
- ಮಹಿಳೆಯರಿಗೆ ಉತ್ತಮ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು, ಬಿಜೆಪಿ ನೇತೃತ್ವದ ಸರ್ಕಾರವು ದೆಹಲಿಯಾದ್ಯಂತ 50,000 ಸಿಸಿಟಿವಿ ಕ್ಯಾಮೆರಾ.
- ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) ಈ ವರ್ಷ ₹6,897 ಕೋಟಿ ಬಜೆಟ್ ಹಂಚಿಕೆ
- ತಿಹಾರ್ ಜೈಲನ್ನು ಸ್ಥಳಾಂತರಿಸಲು ಬಿಜೆಪಿ ನೇತೃತ್ವದ ಸರ್ಕಾರವು ನಗರದ ಹೊರವಲಯದಲ್ಲಿ ಹೊಸ ಜೈಲು ಸ್ಥಾಪನೆ.
- ದೆಹಲಿಯಲ್ಲಿ ಮಾಲಿನ್ಯವನ್ನು ಎದುರಿಸಲು, ಬಿಜೆಪಿ ಸರ್ಕಾರವು ₹300 ಕೋಟಿ ಮೀಸಲು.
ಈ ರೀತಿಯ ಹಲವಾರು ಯೋಜನೆಗಳನ್ನು ದೆಹಲಿ ಸರ್ಕಾರ ಇಂದು ಬಜೆಟ್ ಮಂಡನೆಯಲ್ಲಿ ಘೋಷಿಸಿದೆ.