ದೇಶದಾದ್ಯಂತ ಜನನ ಪ್ರಮಾಣ ಕುಸಿಯುತ್ತಿದೆ ಎಂದು ರಾಷ್ಟ್ರೀಯ ಜನಸಂಖ್ಯಾ ಆಯೋಗ, ಕೇಂದ್ರ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಹೇಳಿದ್ದು, ಫಲವತ್ತತೆ ದರದಲ್ಲಿ ಇಳಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ. 2011 ರಲ್ಲಿ ಪ್ರತಿ ಸಾವಿರಕ್ಕೆ 20.1 ರಷ್ಟಿದ್ದ ಜನನ ಪ್ರಮಾಣವು 2031-35 ರ ವೇಳೆಗೆ 13.1 ಕ್ಕೆ ಇಳಿಯುವ ನಿರೀಕ್ಷೆಯಿದೆ.
ಮನೆ ಬಾಗಿಲಿಗೆ ಬರುತ್ತದೆ ‘ಜನನ ಪತ್ರ’:
ಇನ್ನು, ರಾಜ್ಯದಲ್ಲಿ ಜನನ/ಮರಣ ಪ್ರಮಾಣ ಪತ್ರವನ್ನು ಅಂಚೆ ಇಲಾಖೆ ಮೂಲಕ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ಸೇವೆ ಬೇಕಾದವರು ಪ್ರಮಾಣ ಪತ್ರಕ್ಕೆ ಅರ್ಜಿ ನೀಡುವಾಗ ಸ್ಥಳದಲ್ಲೇ ಇನ್ನೊಂದು ಪ್ರತ್ಯೇಕ ಅರ್ಜಿ ಭರ್ತಿ ಮಾಡಿ ಕೊಟ್ಟರೆ ಸಾಕು. ಕೆಲವೇ ದಿನದೊಳಗೆ ಸರ್ಟಿಫಿಕೇಟ್ ನಿಮ್ಮ ಕೈ ಸೇರುತ್ತದೆ. ಜನನ ಪ್ರಮಾಣಪತ್ರ ಮನೆಗೆ ಬಂದಾಗ ಪೋಸ್ಟ್‌ಮ್ಯಾನ್‌ಗೆ ಸೇವಾ ಶುಲ್ಕ 100 ರೂ ಕೊಡಬೇಕು.