Birth certificate: ಜನನ ಮತ್ತು ಮರಣಗಳ ನೊಂದಣಿ (ತಿದ್ದುಪಡಿ) ಕಾಯ್ದೆ 2023 ಅಕ್ಟೋಬರ್ 1 ರಿಂದ ಜಾರಿಗೊಳ್ಳಲಿದ್ದು, ಆಧಾರ ಕಾರ್ಡ್, ಪಾಸ್ಪೋರ್ಟ್ಗಳು, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಾಗಿ ಬಳಸಬಹುದಾದ ಏಕೈಕ ದಾಖಲೆಯಾಗಿ ಜನನ ಪ್ರಮಾಣ ಪತ್ರ ಬಳಕೆಯಾಗಲಿದ್ದು, ಈ ಕುರಿತು ಸರ್ಕಾರ ಸೆಪ್ಟೆಂಬರ್ 13ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ: ಇಂದಿನ ಹವಾಮಾನ ವರದಿ, ಮುಂದಿನ 24 ಗಂಟೆ ಭಾರೀ ಮಳೆ
Birth certificate: ಇನ್ನೂ ಜನನ ಪ್ರಮಾಣಪತ್ರ ಒಂದೇ ಕಡ್ಡಾಯ ದಾಖಲೆ?
ಅಕ್ಟೋಬರ್ 1ರಿಂದ ಕಡ್ಡಾಯ ಈ ನಿಯಮ ಜಾರಿಗೆ ಬರಲಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ, ಚಾಲನಾ ಪರವಾನಗಿ, ಮತದಾರರ ಪಟ್ಟಿ ತಯಾರಿ, ಆಧಾರ್ ಸಂಖ್ಯೆ, ವಿವಾಹ ನೋಂದಣಿಗೆ ಜನನ, ಉದ್ಯೋಗ ಸೇರ್ಪಡೆ ಸೇರಿ ಇತರ ಉದ್ದೇಶಗಳಿಗೆ ಜನನ ಪ್ರಮಾಣಪತ್ರ ಬಿಟ್ಟು ಬೇರೆ ದಾಖಲೆಗಳನ್ನು ಸಲ್ಲಿಸುವಂತಿಲ್ಲ. ಇದು ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.
ಕಳೆದ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಗೆ ಅನುಮೋದನೆ ನೀಡಲಾಗಿತ್ತು. ಅದರಂತೆ, ಈ ಕಾಯಿದೆ ಜಾರಿಗೆ ಬರುವ ದಿನಾಂಕದಂದು/ ಬಳಿಕ ಎಲ್ಲ ಉದ್ದೇಶಗಳಿಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಬಳಸಬಹುದಾಗಿದೆ.
ಇದನ್ನೂ ಓದಿ: ಪಾಕ್ ಗೆ ಶಾಕ್, ಕೊನೆಯ ಎಸತದಲ್ಲಿ ಲಂಕಾಗೆ ರೋಚಕ ಜಯ
ಜನನ ಪ್ರಮಾಣಪತ್ರ ಕಡ್ಡಾಯ; ಹೊಸ ನಿಯಮದ ಪ್ರಯೋಜನವೇನು?
- ಸರ್ಕಾರದ ಪ್ರಕಾರ, ಈ ನಿಯಮವು ನೋಂದಾಯಿತ ಜನರ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಡೇಟಾಬೇಸ್ ರಚಿಸಲು ಸಹಾಯ ಮಾಡುತ್ತದೆ.
- ಇದು ಸಾರ್ವಜನಿಕ ಸೇವೆಗಳ ಸಮರ್ಥ ಮತ್ತು ಪಾರದರ್ಶಕ ವಿತರಣೆ ಮತ್ತು ಸಾಮಾಜಿಕ ಪ್ರಯೋಜನಗಳು ಮತ್ತು ಡಿಜಿಟಲ್ ನೋಂದಣಿಯನ್ನು ಖಚಿತಪಡಿಸುತ್ತದೆ.
- ಸಂಸತ್ತಿನ 2 ಸದನಗಳು ಕಳೆದ ತಿಂಗಳು ಮುಂಗಾರು ಅಧಿವೇಶನದಲ್ಲಿ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ-2023ರನ್ನು ಅಂಗೀಕರಿಸಿದವು.
ಇದನ್ನೂ ಓದಿ: ಭಾದ್ರಪದ ಮಾಸದ ಮೊದಲ ದಿನದಂದು ಈ ರಾಶಿಯವರಿಗೆ ಲಕ್ಷ್ಮಿ ದೇವಿಯ ಅನುಗ್ರಹ..!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |