ಹರಪನಹಳ್ಳಿ: ಬುಲೆಟ್ ಸವಾರನ ಮೇಲೆ ಲಾರಿ ಹರಿದ ಪರಿಣಾಮ ಬುಲೆಟ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗ್ರಾಮದ ಹಳ್ಳಿನ ಗದ್ದೆ ಬಳಿ ಈ ದುರ್ಘಟನೆ ಸಂಭವಿಸಿದೆ.
ಈ ಘಟನೆಯಲ್ಲಿ ಬುಲೆಟ್ ಸವಾರನ ತಲೆಯೇ ಮೇಲೆಯೇ ಲಾರಿಯು ಹರಿದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಸವಾರನ ತಲೆ ಛಿದ್ರವಾಗಿದ್ದು ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತ ವ್ಯಕ್ತಿಯು ಸುಮಾರು 40 ವರ್ಷದ ಹಾಸು ಪಾಸಿನವನಾಗಿದ್ದು ದಾವಣಗೆರೆಯ ವಿನೋಬನಗರ ನಿವಾಸಿಯಾಗಿದ್ದು ಮುಸ್ಲಿಂ ಸಮುದಾಯದವನು ಎಂದು ಹೇಳಲಾಗಿದೆ.
ಈ ದುರ್ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಘಟನೆ ಬಗ್ಗೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದು, ಈ ಸಂಬಂಧ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಧಾಖಲಾಗಿದೆ.