ವಾಹನ ಚಾಲಕರು ಈಗಾಗಲೇ ಬೆಲೆಯೇರಿಕೆಯಿಂದ ತತ್ತರಿಸಿದ್ದು, ಪೆಟ್ರೋಲ್ ಬೆಲೆ 100 ರೂ. ದಾಟಿದ್ದು, ಡೀಸೆಲ್ ದರ ಕೂಡ ಅದೇ ಹಾದಿಯಲ್ಲಿ ಸಾಗಲು ಸಿದ್ಧವಾಗಿದೆ. ಆದರೆ, ಬೆಲೆಗಳ ಏರಿಕೆ ಈಗಲೇ ಮುಗಿದಂತೆ ಕಾಣುತ್ತಿಲ್ಲ. ಇಂಧನ ಬೆಲೆಗಳು ಮತ್ತಷ್ಟು ಏರಿಕೆಯಾಗುವ ಅವಕಾಶವಿದೆ ಎಂದು ತಜ್ಞರು ಹೇಳುತ್ತಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $ 75 ತಲುಪಿದೆ. ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಯೋಚನೆಯಿಲ್ಲ. ಇಷ್ಟೇ ಅಲ್ಲದೆ, ಕಚ್ಚಾ ತೈಲದ ಬೆಲೆ ಮುಂದಿನ ದಿನಗಳಲ್ಲಿ ಬ್ಯಾರೆಲ್‌ಗೆ $ 100 ತಲುಪುವ ನಿರೀಕ್ಷೆಯಿದೆ.
ಅಂದರೆ ಕಚ್ಚಾ ಬೆಲೆ $ 25 ರಷ್ಟು ಏರಿದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 12 ರಿಂದ 15 ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಇದು ಸಂಭವಿಸಿದಲ್ಲಿ, ವಾಹನ ಚಾಲಕರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಪೆಟ್ರೋಲ್ ಮತ್ತು ಡೀಸೆಲ್‌ಗೆ ಬೆಲೆಯೇರಿಕೆ ಹೊಡೆತದಿಂದ ಈಗಾಗಲೇ ವಾಹನ ಚಾಲಕರ ಜೇಬಿಗೆ ಕತ್ತರಿ ಬಿದ್ದಿದೆ ಎಂದು ಹೇಳಬಹುದು.
ಇಲ್ಲಿಯವರೆಗೆ ನೋಡಿದರೆ 2021 ರಲ್ಲಿ ಡಬ್ಲ್ಯುಟಿಐ ಕಚ್ಚಾ ಬೆಲೆ ಶೇ 50 ರಷ್ಟು ಏರಿಕೆಯಾಗಿದೆ. ಇನ್ನು ಬ್ರೆಂಟ್ ಕಚ್ಚಾ ಶೇಕಡಾ 46 ರಷ್ಟು ಏರಿಕೆಯಾಗಿದೆ. ಕಳೆದ ಎರಡು ವರ್ಷಗಳನ್ನು ನೋಡಿದರೆ, ಕಚ್ಚಾ ಬೆಲೆಗಳು ಈಗ ಗರಿಷ್ಠ ಮಟ್ಟದಲ್ಲಿವೆ ಎಂದು ಹೇಳಬಹುದು. ಈ ವರ್ಷದಿಂದ ಇಲ್ಲಿಯವರೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 14 ರೂ.ಗಿಂತ ಹೆಚ್ಚಾಗಿದೆ.