ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಎಚ್ಚರಿಕೆ: ಈ 8 ಅಪ್ಲಿಕೇಶನ್‌ಗಳನ್ನು ನಿಮ್ಮ ಫೋನ್‌ನಿಂದ ಈಗಲೇ ಡಿಲೀಟ್ ಮಾಡಿ; ಇಲ್ಲದಿದ್ದರೆ..?

ನೀವು Android ಸ್ಮಾರ್ಟ್‌ಫೋನ್ ಬಳಸುತ್ತಿರುವಿರಾ? ಅಗಾದರೆ ನಿಮಗೆ ಎಚ್ಚರಿಕೆ. ನಿಮ್ಮ ಫೋನ್‌ನಿಂದ ನೀವು ತಕ್ಷಣ ಕೆಲವು ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ ನೀವು ತೊಂದರೆಯಲ್ಲಿ ಸಿಲುಕುತ್ತೀರಿ. ಆ ಅಪ್ಲಿಕೇಶನ್‌ಗಳು ಯಾವುವು ಎಂದು ತಿಳಿದುಕೊಳ್ಳಿ. ನೀವು…

mobile phone vijayaprabha news

ನೀವು Android ಸ್ಮಾರ್ಟ್‌ಫೋನ್ ಬಳಸುತ್ತಿರುವಿರಾ? ಅಗಾದರೆ ನಿಮಗೆ ಎಚ್ಚರಿಕೆ. ನಿಮ್ಮ ಫೋನ್‌ನಿಂದ ನೀವು ತಕ್ಷಣ ಕೆಲವು ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ ನೀವು ತೊಂದರೆಯಲ್ಲಿ ಸಿಲುಕುತ್ತೀರಿ. ಆ ಅಪ್ಲಿಕೇಶನ್‌ಗಳು ಯಾವುವು ಎಂದು ತಿಳಿದುಕೊಳ್ಳಿ.

ನೀವು ಸ್ಮಾರ್ಟ್ಫೋನ್ ಬಳಸುತ್ತಿದ್ದೀರಾ? ಅಗಾದರೆ ನಿಮಗೆ ಪ್ರಮುಖ ಎಚ್ಚರಿಕೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿನ ಕೆಲವು ಅಪ್ಲಿಕೇಶನ್‌ಗಳಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹಾನಿಯಾಗುವ ಅವಕಾಶವಿದೆ. ಬಹು ಮುಖ್ಯವಾಗಿ, ಅನೇಕ ಅಪ್ಲಿಕೇಶನ್‌ಗಳು ಜೋಕರ್ ಮಾಲ್‌ವೇರ್ ಹೊಂದಿರುವಂತೆ ತೋರುತ್ತಿದೆ.

ಜೋಕರ್ ಮಾಲ್ವೇರ್ ಅಪ್ಲಿಕೇಶನ್‌ಗಳ ಮೂಲಕ ಸ್ಮಾರ್ಟ್‌ಫೋನ್ ಒಳನುಸುಳಿ ಬಳಕೆದಾರರ ಡೇಟಾವನ್ನು ರಹಸ್ಯವಾಗಿ ಸಂಗ್ರಹಿಸುತ್ತದೆ. ನಂತರ ಮಾಲ್ವೇರ್ ಬಳಕೆದಾರರ ಡೇಟಾದೊಂದಿಗೆ ಜಾಹೀರಾತು ವೆಬ್‌ಸೈಟ್‌ಗಳಿಗೆ ಹೋಗಿ ಪ್ರೀಮಿಯಂ ಚಂದಾದಾರಿಕೆಯನ್ನು ತೆಗೆದುಕೊಳ್ಳುತ್ತದೆ. ಈ ಸಂಗತಿ ಫೋನ್ ಬಳಸುವವರಿಗೆ ಸ್ವಲ್ಪವೂ ತಿಳಿಯುವುದಿಲ್ಲ. ಇದರಿಂದ ಫೋನ್ ಬಳಕೆದಾರರ ಮೇಲೆ ಅನಾನುಕುಲ ಪರಿಣಾಮ ಬೀರುತ್ತದೆ.

Vijayaprabha Mobile App free

ಕ್ವಿಕ್ ಹೀಲ್ ಸೆಕ್ಯುರಿಟಿಯ ಇತ್ತೀಚಿನ ವರದಿಯಲ್ಲಿ ಈ ವಿಷಯ ಬೆಳಕಿಗೆ ತಂದಿದ್ದು, Google Play ನಲ್ಲಿನಾ 8 ಅಪ್ಲಿಕೇಶನ್‌ಗಳಲ್ಲಿ ಈ ಮಾಲ್‌ವೇರ್ ಇರುತ್ತದೆ. ಇನ್ನು, ಅಪ್ಲಿಕೇಶನ್‌ಗಳ ಬಗ್ಗೆ ಗೂಗಲ್‌ಗೆ ಮಾಹಿತಿ ನೀದಿದೆ. ಗೂಗಲ್ ಕೂಡ ತಕ್ಷಣ ತನ್ನ ಪ್ಲೇಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ತೆಗೆದುಹಾಕಿದೆ. ಆ 8 ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಈಗ ನೋಡೋಣ.

1. Super Message
2. Element Scanner
3. Auxiliary Message
4. Fast Magic SMS
5. Free CamScanner
6. Go Messages
7. Travel Wallpapers
8. Super SMS

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಯಾವುದೇ ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್ ಮಾಡಿದ್ದರೆ ತಕ್ಷಣ ಡಿಲೀಟ್ ಮಾಡಿ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.