Mutual funds : ಮ್ಯೂಚುವಲ್ ಫಂಡ್ ನಲ್ಲಿ ವೃತ್ತಿಪರ ಹಣಕಾಸು ನಿರ್ವಾಹಕರು ವಿವಿಧ ಹೂಡಿಕೆದಾರರಿಂದ ಪಡೆದ ಮೊತ್ತವನ್ನು ನಿರ್ವಹಿಸಲು ಹೆಚ್ಚಿನ ಪರಿಣಿತಿಯನ್ನು ಪಡೆದಿರುತ್ತಾರೆ. ಅವರು ಮಾರುಕಟ್ಟೆಯನ್ನು ವಿಶ್ಲೇಷಣೆ ಮಾಡಿ ಲೆಕ್ಕಾಚಾರ ಹಾಕಿ ಆ ಪ್ರಕಾರವೇ ಹೂಡಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ.
ಸಣ್ಣ ಮೊತ್ತದ ಹೂಡಿಕೆ
ಮ್ಯೂಚುವಲ್ ಫಂಡ್ ಗಳಲ್ಲಿ ಸಣ್ಣ ಮೊತ್ತದಿಂದ ಹೂಡಿಕೆ ಪ್ರಾರಂಭಿಸಿ ಹೆಚ್ಚಿನ ಹೂಡಿಕೆಯ ಲಾಭಗಳನ್ನು ಅನುಭವಿಸಬಹುದು. ಎಸ್‌ಐಪಿ ಮೂಲಕ ಹೂಡಿಕೆಗಳನ್ನು ಪ್ರತಿ ತಿಂಗಳಿಗೆ ಕೇವಲ ₹500 ಅಥವಾ ₹1000 ರಿಂದ ಪ್ರಾರ೦ಭಿಸಬಹುದು. ಆರ್ಥಿಕ ಸ್ಥಿರತೆ ಅನುಸಾರವಾಗಿ ಹೂಡಿಕೆ ಮಾಡಬಹುದು.
ವೈವಿಧ್ಯಕರಣ
ಮ್ಯೂಚುವಲ್ ಫಂಡ್ ನ ಪರಿಣಿತರು ಹೂಡಿಕೆಗಳನ್ನು ಒಂದೇ ಕಡೆ ಹೂಡದೇ ಹಲವಾರು ಕಡೆ ಹೂಡುತ್ತಾರೆ. ಇದರಿಂದ ಹೂಡಿಕೆದಾರರು ತಮ್ಮ ಹೂಡಿಕೆಯ ಅಪಾಯವನ್ನು ಕಡಿಮೆ ಮಾಡಬಹುದು. ಜೊತೆಗೆ ಒ೦ದೆರಡು ಹೂಡಿಕೆಗಳಲ್ಲಿ ನಷ್ಟವಾದರೂ, ಇತರ ಹೂಡಿಕೆಗಳಿಂದ ಲಾಭ ಪಡೆಯಬಹುದು.
ಪಾರದರ್ಶಕತೆ
ಮ್ಯೂಚುವಲ್ ಫಂಡ್ ನಲ್ಲಿ ಪಾರದರ್ಶಕತೆ ಪ್ರಮುಖ ಅಂಶವಾಗಿದೆ. ಇದು ಹೂಡಿಕೆದಾರರಿಗೆ ಹೂಡಿಕೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ತಮ್ಮ ಹೂಡಿಕೆಗಳ ಸ್ಥಿತಿಯನ್ನು ನಿಯಮಿತವಾಗಿ ತಿಳಿಯಲು ಆನ್ಸೆನ್ ಪ್ಲಾಟ್‌ಫಾರ್ಮ್ ಗಳ, ಅಪ್ಲಿಕೇಶನ್‌ಗಳ ಮೂಲಕ ಸೌಲಭ್ಯವನ್ನು ಒದಗಿಸುತ್ತದೆ.
ಸುರಕ್ಷತೆ
ಮ್ಯೂಚುವಲ್ ಫಂಡ್ ಗಳನ್ನು ಸೆಬಿ (ಸೆಕ್ಯುರಿಟೀಸ್ ಅಂಡ್ ಎಂಜ್ ಬೋರ್ಡ್ ಆಫ್ ಇಂಡಿಯಾ) ನಿರ್ವಹಿಸುವ ಕಾರಣ ಈ ಹೂಡಿಕೆಗಳಲ್ಲಿ ಹೂಡಿದ ಹಣ ಸುರಕ್ಷಿತವಾಗಿರುತ್ತದೆ. ಎಲ್ಲಾ ಹೂಡಿಕೆಗಳನ್ನು ಶಿಸ್ತುಬದ್ದವಾಗಿ ಹಾಗೂ ಸಂಸ್ಥೆಯ ನಿಯಂತ್ರಣದಲ್ಲಿಯೇ ನಿರ್ವಹಿಸಲಾಗುತ್ತದೆ.
ಹಣದುಬ್ಬರಕ್ಕೆ ಉತ್ತರ
ಮ್ಯೂಚುವಲ್ ಫಂಡ್ ಗಳಲ್ಲಿ ಚಿಕ್ಕ ಪ್ರಮಾಣದಲ್ಲಿಯಾದರೂ ಸರಿ, ಸತತವಾಗಿ ಹಾಗೂ ದೀರ್ಘಾವಧಿಯಲ್ಲಿ ಹಣವನ್ನು ಹೂಡುವ ಮೂಲಕ ಭವಿಷ್ಯದ ಹಣದುಬ್ಬರವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ.
ಹಲವು ಆಯ್ಕೆಗಳು
ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆದಾರರಿಗೆ ತಮ್ಮ ಹಣವನ್ನು ಹೂಡಲು ಹಲವಾರು ಆಯ್ಕೆಗಳಿವೆ. ಇದರಿಂದ ಹೂಡಿಕೆದಾರ ತನ್ನ ಮನಸ್ಸಿಗೆ ಒಪ್ಪುವ, ಹೆಚ್ಚಿನ ಲಾಭದ ಖಚಿತತೆ ಇರುವ ಹೂಡಿಕೆಯನ್ನು ಆರಿಸಿಕೊಳ್ಳಬಹುದು.