ಮೂರೇ ದಿನ ಬಾಕಿ: ನಿಮ್ಮ ಪ್ಯಾನ್‌, ಆಧಾರ್‌ ಲಿಂಕ್‌ ಮಾಡ್ಬೇಕಾ? ಆಧಾರ್‌ ಜೊತೆ ಪಾನ್ ಲಿಂಕ್‌ ಮಾಡುವ ಮುನ್ನ ಎಚ್ಚರ, ಎಚ್ಚರ!

ಕೇಂದ್ರ ಸರ್ಕಾರ ಈಗಾಗಲೇ ಪ್ಯಾನ್ ಕಾರ್ಡ್ -ಆಧಾರ್ ಕಾರ್ಡ್ ಲಿಂಕ್ (PAN Card Link with Aadhaar Card)ಮಾಡಲು ಹಲವು ಬಾರಿ ಡೆಡ್‌ಲೈನ್‌ ವಿಸ್ತರಿಸಿದ್ದು, ಕೊನೆಯ ಅವಕಾಶವಾಗಿ ಮಾರ್ಚ್ 31ರಂದು ಕಾಲಾವಕಾಶವಿದೆ. ಅಷ್ಟರಲ್ಲಿ ನೀವು…

Aadhaar card link with PAN card

ಕೇಂದ್ರ ಸರ್ಕಾರ ಈಗಾಗಲೇ ಪ್ಯಾನ್ ಕಾರ್ಡ್ -ಆಧಾರ್ ಕಾರ್ಡ್ ಲಿಂಕ್ (PAN Card Link with Aadhaar Card)ಮಾಡಲು ಹಲವು ಬಾರಿ ಡೆಡ್‌ಲೈನ್‌ ವಿಸ್ತರಿಸಿದ್ದು, ಕೊನೆಯ ಅವಕಾಶವಾಗಿ ಮಾರ್ಚ್ 31ರಂದು ಕಾಲಾವಕಾಶವಿದೆ. ಅಷ್ಟರಲ್ಲಿ ನೀವು 1,000ರೂ ದಂಡ ಕಟ್ಟಿ ಪ್ಯಾನ್ ಕಾರ್ಡ್ -ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಇಲ್ಲದಿದ್ದರೆ ಪ್ಯಾನ್ ಕಾರ್ಡ್ ನಂತರ ಕೆಲಸ ಮಾಡುವುದಿಲ್ಲ ಎನ್ನಲಾಗಿದೆ.

ಇದನ್ನು ಓದಿ: ನಿಮ್ಮ ಆಧಾರ್‌-ಪ್ಯಾನ್‌ ಲಿಂಕ್‌ ಆಗದಿದ್ದರೆ ಸಮಸ್ಯೆ ಏನು? 1000 ರೂ ದಂಡದೊಂದಿಗೆ ಸುಲಭವಾಗಿ ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿ

ಆದರೆ, ಇದಕ್ಕಾಗಿ ಮಾರ್ಚ್​​​​ 31ರೊಳಗೆ ಆಧಾರ್​​ ಲಿಂಕ್ ಮಾಡಲು ಡೆಡ್​​ಲೈನ್ ಕೊಟ್ಟಿದ್ದು ಜನರೆಲ್ಲ ಸೈಬರ್​ ಸೆಂಟರ್​ಗಳತ್ತ ಮುಗಿಬಿದ್ದಿದ್ದು, ಇದ್ರಲ್ಲೂ ಕೂಡ ಗೋಲ್​ಮಾಲ್ ನಡೀತಿದೆ. ಇದನ್ನೆ ಬಂಡವಾಳ‌ ಮಾಡಿಕೊಂಡಿರುವ ಕೆಲ ಸೈಬರ್ ಸೆಂಟರ್​​ಗಳ‌ ಮಾಲೀಕರು, ಇನ್​​ಕಮ್ ಟ್ಯಾಕ್ಸ್​ (ಆದಾಯ ತೆರಿಗೆ) ವೆಬ್​​ಸೈಟ್​ ಬದಲಾಗಿ, ಬೇರೆ ಬೇರೆ ವೆಬ್ ಸೈಟ್ ಗಳಲ್ಲಿ ಪಾನ್ ಹಾಗೂ ಆಧಾರ್ ಲಿಂಕ್ ಮಾಡ್ತಿದಾರೆ. ಮಾಡಿ ಜನರಿಂದ‌ ಹಣ ಹೊಡೆಯುತ್ತಿದ್ದಾರೆ. 500 ರೂ ಪ್ರೊಸೆಸಿಂಗ್ ಫೀಸ್‌ ವಸೂಲಿ ಮಾಡ್ತಿದಾರೆ ಎಂಬ ಆರೋಪ ಕೇಳಿಬರುತ್ತಿದೆ. ಜೊತೆಗೆ ಹೆಚ್ಚುವರಿ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುತ್ತಿದ್ದು, ಆದ್ದರಿಂದ ಜನರು ಎಚ್ಚರವಾಗಿರುವುದು ಒಳಿತು.

Vijayaprabha Mobile App free

ಇದನ್ನು ಓದಿ: ಕರ್ನಾಟಕ ಆಯುಷ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ; 10, 12ನೇ ತರಗತಿ, ಐ.ಟಿ.ಐ ಆದವರು ಅರ್ಜಿ ಸಲ್ಲಿಸಿ

ಸುರಕ್ಷತವಾಗಿ ಯಾವ ರೀತಿ ಆಧಾರ್‌ ಮತ್ತು ಪಾನ್ ಲಿಂಕ್‌ ಮಾಡುವುದು:

ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ -ಆಧಾರ್ ಕಾರ್ಡ್ ಲಿಂಕ್ ಮಾಡಲು ಬಯಸಿದರೆ ನೀವು ಇನ್​​ಕಮ್ ಟ್ಯಾಕ್ಸ್​ (ಆದಾಯ ತೆರಿಗೆ) ಇಲಾಖೆಯ ಅಧಿಕೃತ ವೆಬ್ ಸೈಟ್ https://www.incometax.gov.in/iec/foportal/ ಇಲ್ಲಿ ಕ್ಲಿಕ್ ಮಾಡಿ. ಮುಖಪುಟದ ಎಡಭಾಗದಲ್ಲಿರುವ ಲಿಂಕ್ ಆಧಾರ್ (link aadhar) ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಿಮ್ಮ ಹತ್ತು ಅಂಕಿಯ ಪ್ಯಾನ್ ಸಂಖ್ಯೆ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ ವ್ಯಾಲಿಡೇಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನು ಓದಿ: ಗಮನಿಸಿ: ಪ್ಯಾನ್-ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ಅವಕಾಶ; ಇವರಿಗೆ ಮಾತ್ರ ಕಡ್ಡಾಯವಲ್ಲ..!

ನಂತರ ಅದರಲ್ಲಿ ಇ-ಪೇ ತೆರಿಗೆ ಮೇಲೆ ಕ್ಲಿಕ್ ಮಾಡಿ ಎರಡು ಬಾರಿ ಪಾನ್ ನಂಬರ್ ಅನ್ನು ದೃಢೀಕರಿಸಿ ನಂತರ ಫೋನ್ ಸಂಖ್ಯೆ ನಮೂದಿಸಿ, ನಿಮ್ಮ ಫೋನ್‌ಗೆ ಬರುವ ಓಟಿಪಿನಿ ಬರುವ ಪುಟದಲ್ಲಿ ನಮೂದಿಸಬೇಕು.

ಓಟಿಪಿ ಪರಿಶೀಲನೆ ಮಾಡಿದ ನಂತರ ನಿಮಗೆ ಪೇಮೆಂಟ್ ಆಪ್ಷನ್ಸ್ ಕಾಣುತ್ತದೆ. ಅದರಲ್ಲಿ income tax ಆಯ್ಕೆ ಮಾಡಿ, ನಂತರ ಅಸೆಸ್ಮೆಂಟ್ ವರ್ಷ (Ay-20223-24) ನೀವು ಆಯ್ಕೆ ಮಾಡಿ, ರಿಸಿಪ್ಟ್ಸ್ ಆಯ್ಕೆ ಮಾಡಬೇಕು.

ಇದನ್ನು ಓದಿ: ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಒಂದೇ ಕನೆಕ್ಷನ್‌ನಲ್ಲಿ 2 ಸಿಮ್‌ಗಳು, ಉಚಿತ DTH, OTT, ಅನಿಯಮಿತ ಡೇಟಾ!

ಈ ಪ್ರಕ್ರಿಯೆಗಳು ಮುಗಿದಿದ್ದರೆ ನಿಮ್ಮನ್ನು ಪೇಮೆಂಟ್ ಗೇಟ್‌ವೆಕು ಕರೆದುಕೊಂಡು ಹೋಗುತ್ತದೆ, ಅಲ್ಲಿ ಹಣ ಪಾವತಿಸಬೇಕು. ಪೇಮೆಂಟ್ ಮಾಡುವುದು ಮುಗಿದ ಮೇಲೆ ವಿವರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಮತ್ತೆ ಇಲಾಖೆಯ https://www.incometax.gov.in/iec/foportal/ ಇಲ್ಲಿ ಕ್ಲಿಕ್ ಮಾಡಿ. ಮುಖಪುಟದ ಎಡಭಾಗದಲ್ಲಿರುವ ಲಿಂಕ್ ಆಧಾರ್ ಸ್ಟೇಟಸ್(Link Aadhaar Status) ಮೇಲೆ ಕ್ಲಿಕ್ ಮಾಡಿ ತಿಳಿದುಕೊಳ್ಳಬಹುದು.

ಇದನ್ನು ಓದಿ: 500ರೂ ನೋಟು ನಕಲಿ ಅಥವಾ ಅಸಲಿ ಎಂದು ಗುರುತಿಸುವುದು ಹೇಗೆ? ಈ ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.