ಡಾಕ: ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ಆಟಗಾರ್ತಿ ಸಂಜಿದಾ ಇಸ್ಲಾಂ ಅವರು ತಮ್ಮ ಮದುವೆಯ ದಿನದಂದೇ ಬ್ಯಾಟ್ ಬೀಸುವ ಮೂಲಕ ಇದೀಗ ಸುದ್ದಿಯಲ್ಲಿದ್ದಾರೆ. ಹೌದು ಬಾಂಗ್ಲಾದೇಶ ಪ್ರಥಮ ದರ್ಜೆ ಕ್ರಿಕೆಟಿಗ ಮಿಮ್ ಮೊಸದ್ದೇಕ್ ಅವರನ್ನು ವರಿಸಿರುವ ಸಂಜಿದಾ ಇಸ್ಲಾಂ ಅವರು, ಕಿತ್ತಳೆ ಸೀರೆ, ಹಸಿರು ಕುಪ್ಪಸ ತೊಟ್ಟು ಮರದ ಬ್ಯಾಟ್ ನೊಂದಿಗೆ ಬ್ಯಾಟ್ ಬೀಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಂಜಿದಾ ಇಸ್ಲಾಂ ಅವರು ಬಾಂಗ್ಲಾದೇಶದ ರಂಗಾಪುರ್ ಜನಿಸಿದ ಇವರು ಬಾಂಗ್ಲಾ ಮಹಿಳಾ ಕ್ರಿಕೆಟ್ ತಂಡದ ಬಲಗೈ ಬ್ಯಾಟ್ಸಮನ್ ಆಗಿದ್ದಾರೆ. ಸದ್ಯ ಸಂಜಿದಾ ಇಸ್ಲಾಂ ಅವರು ತಮ್ಮ ಮದುವೆಯ ಫೋಟೋ ಶೂಟ್ ಸಂದರ್ಭದಲ್ಲಿ ಸೀರೆಯನ್ನು ಉಟ್ಟುಕೊಂಡು ಬ್ಯಾಟಿಂಗ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ರಶೀದ್ ಖಾನ್ ಅವರ ಪತ್ನಿ ಅನುಷ್ಕಾ ಶರ್ಮಾ..? ಏನಿದರ ಒಳಮರ್ಮ
A wedding photoshoot that has bowled us over 📷 🏏
Bangladesh 🇧🇩 international Sanjida Islam strikes quite a pose. She got married to Mim Mosaddeak, a first-class cricketer from Rangpur.
(Photos: @ProthomAlo) pic.twitter.com/52jNxhmedu
— ESPNcricinfo (@ESPNcricinfo) October 21, 2020




