Holiday: ಕರ್ನಾಟಕದಲ್ಲಿ ಅಕ್ಟೋಬರ್‌ನಲ್ಲಿ ತಿಂಗಳಲ್ಲಿ 10 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇದ್ದು, ಮುಂದಿನ ತಿಂಗಳು ಬ್ಯಾಂಕ್ ಕೆಲಸಗಳಿದ್ದರೆ ಕೊಂಚ ಬೇಗ ಬೇಗನೆ ಮಾಡಿಕೊಳ್ಳಿ. ಏಕೆಂದರೆ, ಅಕ್ಟೋಬರ್ ತಿಂಗಳಲ್ಲಿ ಭಾನುವಾರ ಸೇರಿದಂತೆ, ಗಾಂಧಿ ಜಯಂತಿ, ಎರಡನೇ ಶನಿವಾರ, ನಾಲ್ಕನೇ ಶನಿವಾರ, ಆಯುಧಪೂಜೆ, ವಿಜಯ ದಶಮಿ ಹಬ್ಬ ಸೇರಿದಂತೆ ಸಾಲು ಸಾಲು ರಜೆಗಳು ಬರಲಿವೆ.
ಇದನ್ನೂ ಓದಿ: ಒಂದೇ ಬಾರಿಗೆ ಕೈಗೆ 64 ಲಕ್ಷ ರೂ; ಹೆಣ್ಣು ಮಕ್ಕಳಿಗೆ ಬೆಸ್ಟ್ ಸ್ಕೀಮ್; ದಿನಕ್ಕೆ ಇಷ್ಟು ಕಟ್ಟಿದರೆ ಸಾಕು!
ಆದ್ದರಿಂದ, ಬ್ಯಾಂಕ್‌ಗೆ ಹೋಗುವವರು ತಮ್ಮ ಕೆಲಸವನ್ನು ಅದಕ್ಕೆ ತಕ್ಕಂತೆ ಪ್ಲಾನ್ ಮಾಡಬೇಕು. ಹಬ್ಬ ಹರಿದಿನಗಳಿಂದಾಗಿ ಉತ್ತರ ಭಾರತದಲ್ಲಿಯೂ ಹೆಚ್ಚು ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

Holiday: ಯಾವ ದಿನ 10 ದಿನ ಬ್ಯಾಂಕ್ ರಜೆ?
- ಅಕ್ಟೋಬರ್ 1,8,15,22,29 – ಭಾನುವಾರ
- ಅಕ್ಟೋಬರ್ 2 –ಗಾಂಧಿ ಜಯಂತಿ ಪ್ರಯುಕ್ತ ರಜೆ
- ಅಕ್ಟೋಬರ್ 14, 28 – 2ನೇ ಮತ್ತು 4ನೇ ಶನಿವಾರ
- ಅಕ್ಟೋಬರ್ 23 – ಮಹಾನವಮಿ, ಆಯುಧ ಪೂಜೆ ರಜೆ
- ಅಕ್ಟೋಬರ್ 24 – ವಿಜಯದಶಮಿ/ ದಸರಾ ರಜೆ
ಇದನ್ನೂ ಓದಿ: 484 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಇಂದೇ ಅರ್ಜಿ ಸಲ್ಲಿಸಿ
ಅಕ್ಟೋಬರ್‌ನಲ್ಲಿ ಬ್ಯಾಂಕ್‌ಗಳಿಗೆ 16 ದಿನಗಳವರೆಗೆ ರಜೆ?
ಇನ್ನು, ದೇಶದಲ್ಲಿ ಅಕ್ಟೋಬರ್ ತಿಂಗಳಲ್ಲಿ 16 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳ ಪ್ರಕಾರ, ರಾಜ್ಯವನ್ನು ಅವಲಂಬಿಸಿ ಎಲ್ಲಾ ಸಾರ್ವಜನಿಕ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ ರಜಾದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡಲಿದ್ದು, ಪ್ರಾದೇಶಿಕ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ಆರ್‌ಬಿಐದ ರಜೆಗಳ ಪಟ್ಟಿಯ ಪ್ರಕಾರ, ಮುಂದಿನ ತಿಂಗಳು ಒಟ್ಟು 15 ದಿನಗಳಿಗಿಂತ ಹೆಚ್ಚು ರಜಾದಿನಗಳು ಇರಲಿವೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |